Home » Smruthi Mandana: ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂದಾನ !! ಊಹಿಸಲಾಗದಂತಹ ಸಾಧನೆಗೈದ ಛಲಗಾತಿ

Smruthi Mandana: ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂದಾನ !! ಊಹಿಸಲಾಗದಂತಹ ಸಾಧನೆಗೈದ ಛಲಗಾತಿ

0 comments

Smruthi Mandana: ಮಹಿಳಾ ಕ್ರಿಕೆಟ್ ಲೋಕದಲ್ಲಿ ಭಾರತೀಯ ಆಟಗಾರ್ತಿಯಾದ ಸ್ಮೃತಿ ಮಂದಾನ ಅವರ ಹೆಸರು ನಕ್ಷತ್ರದ ರೀತಿ ಮಿನುಗುತ್ತಿದೆ. ಇದೀಗ ಈಕೆ ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿ ದಾಖಲೆ ಬರೆದಿದ್ದಾರೆ.

ಹೌದು, ಮಹಿಳಾ ಕ್ರಿಕೆಟ್ ನ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಈಗಾಗಲೇ ಒಂದು ವರ್ಷದಲ್ಲಿ ನಾಲ್ಕು ಶತಕಗಳನ್ನು ಬಾರಿಸುವ ಮೂಲಕ ದಾಖಲೆ ನಿರ್ಮಿಸಿರುವ ಈ ಕ್ರಿಕೆಟ್ ರಾಣಿ, ತಮ್ಮ ಖಾತೆಗೆ ಮತ್ತೊಂದು ದಾಖಲೆಯನ್ನು ಸೇರಿಸಿಕೊಂಡಿದ್ದು, ಒಂದೇ ವರ್ಷದಲ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಅವರು ನಿರ್ಮಿಸಿದ್ದಾರೆ.

ಇದನ್ನೂ ಓದಿ:Rishab Shetty : ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ಮುಂದಿನ ಸಿನಿಮಾಗಳಾವು? ಇಲ್ಲಿದೆ ನೋಡಿ ಲಿಸ್ಟ್

ಸ್ಮೃತಿ ಮಂಧಾನ ಆಸ್ಟ್ರೇಲಿಯಾದ ದಂತಕಥೆ ಆಟಗಾರ್ತಿ ಬೆಲಿಂಡಾ ಕ್ಲಾರ್ಕ್ ಅವರ ದಾಖಲೆಯನ್ನು ಮುರಿದಿದ್ದಾರೆ. 1997 ರಲ್ಲಿ, ಬೆಲಿಂಡಾ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಗಳಿಸಿದರು. ಆ ವರ್ಷ ಬೆಲಿಂಡಾ ಒಟ್ಟು 16 ಪಂದ್ಯಗಳನ್ನು ಆಡಿದ್ದು, 14 ಇನ್ನಿಂಗ್ಸ್‌ಗಳಲ್ಲಿ 80.83 ಸರಾಸರಿ ಮತ್ತು 98.11 ಸ್ಟ್ರೈಕ್ ರೇಟ್‌ನಲ್ಲಿ 970 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ. ಸ್ಮೃತಿ ಮಂಧಾನ 17 ಇನ್ನಿಂಗ್ಸ್‌ಗಳಲ್ಲಿ 59.93 ಸರಾಸರಿ ಮತ್ತು 113 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 971* ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕಗಳು ಸೇರಿವೆ.

You may also like