Smruthi Mandana : ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದು ಇದರಿಂದಾಗಿ ನಡೆಯಬೇಕಿದ್ದ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಬೆನ್ನಲ್ಲೇ ಸ್ಮೃತಿ ಮಂದಾನ ಬಾವಿಪತಿಗೂ ಕೂಡ ಆರೋಗ್ಯ ಕೈಕೊಟ್ಟಿದೆ. ಇದರ ನಡುವೆ ಸ್ಮೃತಿ ಮಂದಾನ ಅವರು ತಮ್ಮ ಸೋಶಿಯಲ್ ಮೀಡಿಯಾ ಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಹೀಗಾಗಿ ಸ್ಮೃತಿ ಮಂದಾನ ಮದುವೆ ನಿಲ್ಲಲು ಬೇರೆ ರಿಸನ್ ಇದೆ, ಅವರ ಬಾವಿಪತಿಯವರಿಗೆ ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ.
ಹೌದು, ತಮ್ಮ ಭಾವಿ ಪತಿಯಾದ ಪಲಾಶ್ ಮುಚ್ಚಲ್ ಕೂಡ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಬಳಿಕ ಬಿಡುಗಡೆಯಾಗಿದ್ದಾರೆ. ಇದೀಗ ಸ್ಮೃತಿ ಅವರು ಮದುವೆ ಮತ್ತು ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋಗಳನ್ನು, ಪಲಾಶ್ ಅವರು ಪ್ರಪೋಸ್ ಮಾಡಿದ್ದ ವಿಡಿಯೋವನ್ನು ಕೂಡ ಅಳಿಸಲಾಗಿದೆ.
ಆದರೆ ಇದೀಗ ಈ ಮದುವೆ ಬಗ್ಗೆ ಹಲವು ರೂಮರ್‌ಗಳು ಕಾಣಸಿಗುತ್ತಿವೆ. ಸ್ಮೃತಿ ಮಂಧಾನ ಮದುವೆಯ ಎಲ್ಲ ಫೋಟೊ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದಾರೆ. ಇಲ್ಲಿ ಬೇರೆ ಕಥೆಯೇ ನಡೆದಿದೆ ಎಂದು ಹೇಳಲಾಗಿದೆ. ಪಲಾಶ್ ಮುಚ್ಚಲ್ ಮದುವೆಯ ಹಿಂದಿನ ದಿನ ಕೋರಿಯೋಗ್ರಾಫರ್ ಜೊತೆ ಚೀಟ್ ಮಾಡಿದ್ದು, ಮದುವೆ ನಿಲ್ಲೋದಕ್ಕೆ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ಪಲಾಶ್ ಆಗಲಿ ಅಥವಾ ಸ್ಮೃತಿ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ.
