Home » Smruthi Mandana : ಮದುವೆ ಮುಂದೂಡಿದ ಬಳಿಕ ಮೊದಲ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಸ್ಮೃತಿ – ವಿಡಿಯೋ ನೋಡಿ ಎಲ್ಲರೂ ಶಾಕ್!!

Smruthi Mandana : ಮದುವೆ ಮುಂದೂಡಿದ ಬಳಿಕ ಮೊದಲ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಸ್ಮೃತಿ – ವಿಡಿಯೋ ನೋಡಿ ಎಲ್ಲರೂ ಶಾಕ್!!

0 comments

Smruthi Mandana : ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದು ಇದರಿಂದಾಗಿ ನಡೆಯಬೇಕಿದ್ದ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ ಸ್ಮೃತಿ ಮಂದಾನ ಮದುವೆ ನಿಲ್ಲಲು ಬೇರೆ ರಿಸನ್ ಇದೆ, ಅವರ ಬಾವಿಪತಿಯವರಿಗೆ ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತಾಗಿ ಸ್ಮೃತಿ ಅವರು ಎಲ್ಲಿಯೂ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಇದೀಗ ಅಚ್ಚರಿ ಎಂಬಂತೆ ಮದುವೆ ಮುಂದೂಡಿದ ಬಳಿಕ ಮೊದಲ ಬಾರಿಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಹೌದು, ಮದುವೆಯನ್ನು ಹಲವು ದಿನಗಳ ಕಾಲ ವಿಳಂಬ ಮಾಡಿದ ನಂತರ ಸ್ಮೃತಿ ಸೋಶಿಯಲ್‌ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸ್ಮೃತಿ ಮದುವೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಸ್ಮೃತಿ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ತಮ್ಮ ಅನುಭವಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

View this post on Instagram

A post shared by Smriti Mandhana (@smriti_mandhana)

ವಿಡಿಯೋದಲ್ಲಿ”ಕಳೆದ 12 ವರ್ಷಗಳಲ್ಲಿ ವಿಶ್ವಕಪ್ ಗೆಲ್ಲಲು ವಿಫಲವಾದ ನಂತರ, ನಾವು ಎಂದಾದರೂ ಅದನ್ನು ಗೆಲ್ಲಲು ಸಾಧ್ಯವೇ? ಅನ್ನೂ ಪ್ರಶ್ನೆ ಎದುರಾಗಿತ್ತು” ಎಂದು ಸ್ಮೃತಿ ಹೇಳಿದರು. ವಿಶ್ವಕಪ್ ಗೆದ್ದ ನಂತರ ನಾನೀಗ ಚಿಕ್ಕ ಮಗುವಿನಂತೆ ಸಂತಸ ಪಡುತ್ತಿದ್ದೇನೆ. ನಾನು ಫೀಲ್ಡಿಂಗ್ ಮಾಡುವಾಗ ಎಲ್ಲಾ ದೇವರುಗಳ ಹೆಸರನ್ನು ಜಪಿಸಿದೆ. ಈ ವಿಕೆಟ್‌ಗಳನ್ನು ಪಡೆಯಲು ನಾನು ಸಂಪೂರ್ಣ 300 ಎಸೆತಗಳನ್ನು ಜಪಿಸುತ್ತಾ ಪ್ರಾರ್ಥಿಸುತ್ತಿದ್ದೆ” ಎಂದು ಹೇಳಿದ್ದಾರೆ.

ಆದರೆ ಆಶ್ಚರ್ಯವೇನೆಂದರೆ ಅವರ ಕೈ ಬೆರಳಿನಿಂದ ನಿಶ್ಚಿತಾರ್ಥದೊಂದು ತೊಡಿಸಿದ್ದ ರಿಂಗ್ ಮಾಯವಾಗಿದೆ. ಇದು ಹಲವಾರು ಫ್ಯಾನ್ಸ್ ಗಳ ಗಮನ ಸೆಳೆದಿದ್ದು, ಅನೇಕರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸ್ಮೃತಿ ಅವರಿಗೆ ಅವರ ಬಾವಿಪತಿ ಮೋಸ ಮಾಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕೂಡ ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

You may also like