Home » ಹಾವು ಕಚ್ಚಿ ಯುವಕ ಸಾವು | ಕೆಲಸಕ್ಕೆ ಹೋಗಿದ್ದ ವೇಳೆ ಕಚ್ಚಿದ ಹಾವು

ಹಾವು ಕಚ್ಚಿ ಯುವಕ ಸಾವು | ಕೆಲಸಕ್ಕೆ ಹೋಗಿದ್ದ ವೇಳೆ ಕಚ್ಚಿದ ಹಾವು

by Praveen Chennavara
1 comment

ಹಾವಿನ ಕಡಿತಕ್ಕೊಳಗಾಗಿ ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನಿಂದ ವರದಿಯಾಗಿದೆ.

ಬಡಗಕಜೆಕಾರು ಗ್ರಾಮದ ಪಾಂಡವರ ಕಲ್ಲು ನಿವಾಸಿ ಉಸ್ಮಾನ್ ಅವರ ಪುತ್ರ ಆಸಿದ್(26) ಮೃತಪಟ್ಟವರು. ಆಸಿದ್ ಅವರು ಕೂಲಿ ಕಾರ್ಮಿಕರಾಗಿದ್ದು, ವಾಮದಪದವು ಬಳಿ ಮಂಗಳವಾರ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಾವಿನ ಕಡಿತಕ್ಕೊಳಗಾಗಿದ್ದರು.

ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

You may also like

Leave a Comment