Home » Snake Bite: ಪ್ರತಿ ಶನಿವಾರ ಹಾವು ಕಚ್ಚುತ್ತೆ ಈತನಿಗೆ; ಭವಿಷ್ಯದಲ್ಲಿದೆ ಒಂದು ವಿಶೇಷ ಅಚ್ಚರಿ

Snake Bite: ಪ್ರತಿ ಶನಿವಾರ ಹಾವು ಕಚ್ಚುತ್ತೆ ಈತನಿಗೆ; ಭವಿಷ್ಯದಲ್ಲಿದೆ ಒಂದು ವಿಶೇಷ ಅಚ್ಚರಿ

0 comments
Snake Bite

Snake Bite: ಉತ್ತರ ಪ್ರದೇಶದ ಫತೇಪುರದಲ್ಲಿ ಓರ್ವ ಯುವಕನಿಗೆ ಒಂದಲ್ಲ, ಎರಡಲ್ಲ ಕಳೆದ 40 ದಿನಗಳಲ್ಲಿ ಬರೋಬ್ಬರಿ 7 ಬಾರಿ ಹಾವು ಕಚ್ಚಿದ್ದು, ಇಂದು ಶನಿವಾರ ಕೂಡಾ ಆತನಿಗೆ ಹಾವ ಕಚ್ಚಿದೆ. ಹಾವು ಕಚ್ಚಿಸಿಕೊಂಡ ಯುವಕ ವಿಕಾಸ್‌ (24) ದುಬೆಯನ್ನು ಗಂಭೀರ ಸ್ಥಿತಿಯಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗ ಈತನ ಆರೋಗ್ಯ ಸ್ಥಿರವಾಗಿದೆ.

ಜೂನ್‌ 2 ರಿಂದ ಜುಲೈ 6 ರ ನಡುವೆ ದುಬೆಗೆ ಆರು ಬಾರಿ ಹಾವು ಕಚ್ಚಿರುವ ಪ್ರಕರಣ ನಡೆದಿದೆ. ಇದರಿಂದ ಈತನ ಕುಟುಂಬ ಕಳವಳ ವ್ಯಕ್ತಪಡಿಸಿದ್ದಾರೆ. 8 ಬಾರಿ ಹಾವು ಕಚ್ಚುವವರೆಗೆ ಮಾತ್ರ ಈತ ಬದುಕುತ್ತಾನೆ ಎಂದು ಈತನ ಭವಿಷ್ಯದಲ್ಲಿದೆಯಂತೆ. 9 ನೇ ಬಾರಿಗೆ ಹಾವು ಕಚ್ಚಿದರೆ ಯಾವುದೇ ವೈದ್ಯರು ಈತನನ್ನು ಬದಕುಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಹಾವು ಈತನಿಗೆ ಜೂನ್‌ 2 ರಂದು ಕಚ್ಚಿದ್ದು, ನಂತರ ಆರು ಬಾರಿ ಹಾವು ಕಚ್ಚಿದೆ. ಪ್ರತಿ ಬಾರಿನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮನೆಯವರು ಈತನಿಗೆ ನಾಲ್ಕನೇ ಬಾರಿ ಹಾವು ಕಚ್ಚಿದಾಗ ತನ್ನ ಮನೆಯನ್ನು ಬಿಟ್ಟು ಬೇರೆ ಕಡೆ ಇರುವಂತೆ ಹೇಳಲಾಯಿತು. ಚಿಕ್ಕಮ್ಮನ ಮನೆಗೆ ಹೋದಾಗ ಅಲ್ಲಿಯೂ ಆತನಿಗೆ ಐದನೇ ಬಾರಿಗೆ ಹಾವು ಕಚ್ಚಿತು. ನಂತರ ದುಬೆಯ ಪೋಷಕರು ಅವನನ್ನು ಮನೆಗೆ ಕರೆ ತಂದರು.

ಜುಲೈ 6 ರಂದು ಈತನಿಗೆ ಮತ್ತೊಮ್ಮೆ ಹಾವು ಕಚ್ಚಿದೆ. ಈ ಸಮಯದಲ್ಲಿ ಆತನ ಆರೋಗ್ಯ ತೀವ್ರ ಹದಗೆಟ್ಟಿತು. ಕೂಡಲೇ ಆಸ್ಪತ್ರೆಗೆ ಆತನ ಪೋಷಕರು ದಾಖಲು ಮಾಡಿದ್ದು, ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡಿದ್ದಾರೆ.

ವಿಚಿತ್ರ ಸಂಗತಿಯೆಂದರೆ ವಿಕಾಸ್‌ ಗೆ ಹಾವು ಪ್ರತಿಸಲನೂ ಶನಿವಾರ, ಭಾನುವಾರ ಮಾತ್ರ ಕಚ್ಚುತ್ತದೆ. ಕಚ್ಚುವ ಮೊದಲು ಪ್ರತಿ ಸಲ ಆತನಿಗೆ ಒಂದು ಮುನ್ಸೂಚನೆ ದೊರಕುತ್ತಿತ್ತು ಎಂದು ದುಬೆ ಹೇಳಿದ್ದಾರೆ.

Electricity Bill: ನಿಮ್ಮ ಮನೆಯಲ್ಲಿ ಊಹೆಗೂ ಮೀರಿ ಕರೆಂಟ್​ ಬಿಲ್​ ಬರುತ್ತಾ? ಹಾಗಿದ್ರೆ ಮೊದಲು ಈ ಕೆಲಸ ಮಾಡಿ

You may also like

Leave a Comment