5
Bhuvaneshwar: ತನಗೆ ಕಚ್ಚಿದ ನಾಗರ ಹಾವನ್ನು ಕೊಂದು ನಂತರ ಅದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದ ಘಟನೆ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಉಡಾಲಾ ಎಂಬಲ್ಲಿ ನಡೆದಿದೆ.
ಅಜಿತ್ ಕರ್ಮಾಕರ್ ಎಂಬುವರೇ ಹಾವಿನ ಕಡಿತಕ್ಕೆ ಒಳಗಾದ ವ್ಯಕ್ತಿ. ಹಾವಿನ ಕಡಿತಕ್ಕೆ ಒಳಗಾದ ಈತ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶನಿವಾರ (ಮಾ.15) ಅಜಿತ್ ತನ್ನ ಮನೆಯ ಬಳಿ ಕೆಲಸ ಮಾಡುತ್ತಿದ್ದಾಗ ನಾಗರ ಹಾವು ಕಡಿದಿದೆ. ಅಜಿತ್ ಹಾವನ್ನು ಕೊಂದು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾನೆ. ಅಜಿತ್ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ವ್ಯಕ್ತಿ ವೈದ್ಯರಿಗೆ ಹಾವು ತನಗೆ ಮೂರು ಬಾರಿ ಕಚ್ಚಿದೆ ಎಂದು ಹೇಳಿಕೊಂಡಿದ್ದಾನೆ.
