Home » Snake Viral Video : ಅಬ್ಬಾ | ಬಾಯಿಯಿಂದ ಒಳಗೋಯ್ತು 4 ಅಡಿ ಉದ್ದದ ಹಾವು!! ಗಾಬರಿಗೊಂಡ ವೈದ್ಯರು!

Snake Viral Video : ಅಬ್ಬಾ | ಬಾಯಿಯಿಂದ ಒಳಗೋಯ್ತು 4 ಅಡಿ ಉದ್ದದ ಹಾವು!! ಗಾಬರಿಗೊಂಡ ವೈದ್ಯರು!

0 comments

ಅನೇಕರು ಬಾಯಿಯ ಮೂಲಕ ಉಸಿರಾಡುತ್ತಾರೆ. ಇದೇ ಕಾರಣಕ್ಕೆ ನಿದ್ದೆ ಮಾಡುವ ಸಮಯದಲ್ಲಿ ಬಾಯಿಯನ್ನು ತೆರೆದಿಟ್ಟುಕೊಂಡು ನಿದ್ದೆ ಮಾಡುತ್ತಾರೆ. ಆದರೆ ಹೀಗೆ ಬಾಯಿ ತೆರೆದು ಮಲಗುವ ಮಕ್ಕಳನ್ನು ಪೋಷಕರು ಗದರುವುದುಂಟು. ಬಾಯಿಮುಚ್ಚಿ ಮಲಗು ನೊಣ ಹೋಗುತ್ತೆ ಎಂದು ತಮಾಷೆ ಕೂಡ ಮಾಡುತ್ತಾರೆ. ಆದರೆ ಈ ಮಹಿಳೆಯ ಕತೆ ಕೇಳಿದರೆ ಬಾಯಿ ಬಿಟ್ಟು ಮಲಗುವವರು ಕೂಡ ಕೆಲ ಕಾಲ ಬಾಯಿ ಮೇಲೆ ಕೈ ಇಡುವುದು ಪಕ್ಕಾ.

ಕೆಲವೊಂದು ವಿಚಿತ್ರ ಘಟನೆ ಕೇಳಿದಾಗ ಭಯ ಹುಟ್ಟುವುದು ಖಂಡಿತ ಹೌದು ಅದರಲ್ಲೂ ಮಹಿಳೆಯೊಬ್ಬಳ ಅನ್ನನಾಳದಲ್ಲಿದ್ದ ಹಾವೊಂದನ್ನು ವೈದ್ಯರೊಬ್ಬರು ಹೊರತೆಗೆದಿದ್ದಾರೆ ಎಂಬ ವಿಷಯ ಕೇಳಿ ಆಶ್ಚರ್ಯ ಆಗುತ್ತಿದೆ ಆದರೆ ಇದು ನಿಜ. ಈ ಕುರಿತ ವೀಡಿಯೋ ಸಾಕ್ಷಿಯನ್ನು ಸಹ ನೋಡಬಹುದು.

ಹೊಟ್ಟೆಯಲ್ಲಿ ಜಂತು ಹುಳ ಇರುವುದು ಕೇಳಿದ್ದೇವೆ ಮತ್ತು ನೋಡಿರಲುಬಹುದು ಆದರೆ ಮಹಿಳೆಯೊಬ್ಬಳ ಅನ್ನನಾಳದಲ್ಲಿ 4 ಅಡಿ ಉದ್ದದ ಹಾವೊಂದು ಪತ್ತೆಯಾಗಿದೆ.

ಅಂದಹಾಗೆ ಇದು 2020ರಲ್ಲಿ ರಷ್ಯಾದಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ವಿಡಿಯೋದಲ್ಲಿ ಕಾಣಿಸುವಂತೆ ಮಹಿಳೆಯೊಬ್ಬಳನ್ನು ಆಸ್ಪತ್ರೆಯ ಬೆಡ್ ಮೇಲೆ ಅನಸ್ತೇಶಿಯಾ ನೀಡಿ ಮಲಗಿಸಿದ್ದು, ಆಕೆಯ ಬಾಯಿಯ ಮೂಲಕ ಪೈಪೊಂದರ ಮುಖೇನ ಇಕ್ಕಳವೊಂದನ್ನು ಇಳಿಸಿ ಹಾವನ್ನು ಅದರ ಮೂಲಕ ಎಳೆದು ತೆಗೆಯುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಅಷ್ಟು ಉದ್ದದ ಹಾವನ್ನು ನೋಡಿ ಒಂದು ಕ್ಷಣ ವೈದ್ಯರೇ ಬೆಚ್ಚಿ ಕಿರುಚುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. 11 ಸೆಕೆಂಡ್‌ಗಳ ಈ ವಿಡಿಯೋವನ್ನು ಒಂದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಈ ವಿಚಿತ್ರ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವುದರ ಜೊತೆ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿದೆ. ಹೀಗೂ ಸಾಧ್ಯವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಸುದ್ದಿಯ ಜೊತೆ ಮಹಿಳೆಯ ಬಾಯಿಯ ಮೂಲಕ ವೈದ್ಯರು ಹಾವನ್ನು ಹೊರತೆಗೆಯುತ್ತಿರುವ ವಿಡಿಯೋ ಕೂಡ ವೈರಲ್ ಆಗಿದ್ದು ಬೆಚ್ಚಿ ಬೀಳಿಸುತ್ತಿದೆ.

@FascinateFlix ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋ ಪೋಸ್ಟ್ ಆಗಿದೆ. ವೈದ್ಯರು ಮಹಿಳೆಯೊಬ್ಬಳ ದೇಹದಿಂದ ಹಾವೊಂದನ್ನು ಹೊರತೆಗೆದರು. ಆಕೆ ನಿದ್ದೆಗೆ ಜಾರಿದ್ದ ವೇಳೆ ಈ ಹಾವು ಆಕೆಯ ದೇಹವನ್ನು ಪ್ರವೇಶಿಸಿತ್ತು ಎಂದು ವಿಡಿಯೋ ಶೇರ್ ಮಾಡಿ ಬರೆದುಕೊಳ್ಳಲಾಗಿದೆ.

ಒಟ್ಟಿನಲ್ಲಿ ವೀಕ್ಷಕರು ಈ ವೀಡಿಯೋ ನೋಡಿ ಕಕ್ಕಾಬಿಕ್ಕಿ ಆಗಿದ್ದಾರೆ.

You may also like

Leave a Comment