Home » ಬಜರಂಗದಳದ ಕಾರ್ಯಕರ್ತರಿಗೆ ಬಾರಿಸಿ ಎಂದು ದ್ರಾವಿಡ ಸೇನೆಗೆ ಅಗ್ನಿ ಶ್ರೀಧರ್ ಕರೆ; ಗುರುವಿಗೆ ತಿರುಗೇಟು ನೀಡಿದ ನಟ ಚೇತನ್ ಅಹಿಂಸಾ !

ಬಜರಂಗದಳದ ಕಾರ್ಯಕರ್ತರಿಗೆ ಬಾರಿಸಿ ಎಂದು ದ್ರಾವಿಡ ಸೇನೆಗೆ ಅಗ್ನಿ ಶ್ರೀಧರ್ ಕರೆ; ಗುರುವಿಗೆ ತಿರುಗೇಟು ನೀಡಿದ ನಟ ಚೇತನ್ ಅಹಿಂಸಾ !

by Mallika
0 comments

Social media :ಪತ್ರಕರ್ತ ಅಗ್ನಿ ಶ್ರೀಧರ್ ತಮ್ಮ ಇತ್ತೀಚಿನ ಸಾಮಾಜಿಕ ಮಾಧ್ಯಮದಲ್ಲಿ (Social media)ಹೇಳಿಕೆಯಲ್ಲಿ, ತಾವು ಪ್ರತಿ ಹಳ್ಳಿ ಮತ್ತು ಪಟ್ಟಣದಲ್ಲಿ ದ್ರಾವಿಡ ಸೈನ್ಯವನ್ನು ಪ್ರಾರಂಭಿಸಿ, ನಂತರ ‘ ಬಜರಂಗದಳದ ಕಾರ್ಯಕರ್ತರನ್ನು ಬದಲಾಯಿಸಿ ಅಥವಾ ಬಾರಿಸಿ’ ಎಂದು ಹೇಳಿಕೆ ನೀಡಿರುವುದು ಇದೀಗ ಭಾರೀ ವಿವಾದವನ್ನು ಹುಟ್ಟುಹಾಕಿದೆ.

ಈ ಬಗ್ಗೆ ಇಂದು ಭಾನುವಾರ ಹೇಳಿಕೆ ನೀಡಿದ ನಟ ಚೇತನ್ ಕುಮಾರ್, ಅಗ್ನಿ ಶ್ರೀಧರ್ ಹೇಳಿಕೆಯನ್ನು ಖಂಡಿಸಿದ್ದಾರೆ. ‘ಪ್ರತಿ ಊರಿಲ್ಲಿ ದ್ರಾವಿಡ ಪಡೆ ಆರಂಭಿಸಿ; ‘ ಬಜರಂಗದಳದ ಕಾರ್ಯಕರ್ತರನ್ನು ಬದಲಿಸಿ, ಇಲ್ಲವೇ ಬಾರಿಸಿ ಎಂದು ಅಗ್ನಿ ಶ್ರೀಧರ್ ಹೇಳುತ್ತಾರೆ. ಶ್ರೀಧರ್ ಸರ್ ನನಗೆ ಚಲನಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಆದರೆ, ಊರಲ್ಲಿ ಹಿಂಸಾಚಾರಕ್ಕೆ ಅವರು ನೀಡುವ ಈ ಪ್ರಚೋದನೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ ‘ ಎಂದು ಚೇತನ್ ಹೇಳಿದ್ದಾರೆ.

ತಮ್ಮ ಹಿಂದಿನ ಸಹವರ್ತಿ ಶ್ರೀಧರ್ ವಿರುದ್ಧವೇ ಚೇತನ್ ಕಟುವಾಗಿ ಮಾತಾಡಿದ್ದಾರೆ. “ಭೂಗತ ಲೋಕದ (ಮಾಜಿ) ಡಾನ್‌ನಿಂದ ನಾವು ಎಂದಾದರೂ ಸಾಮಾಜಿಕ ಸದಾಚಾರ ಅಥವಾ ಅಹಿಂಸೆಯನ್ನು ನಿರೀಕ್ಷಿಸಬಹುದೇ? “ಎಂದು ಚೇತನ್ ಪ್ರಶ್ನಿಸಿದ್ದಾರೆ. ಶ್ರೀಧರ್ ಮತ್ತು ಚೇತನ್ ಅಹಿಂಸಾ ಮಧ್ಯೆ. ಆತ್ಮೀಯತೆ ಇತ್ತು. ಈಗ ಚೇತನ್ ಮಾತು ಕೇಳಿದ ಮೇಲೆ ಅವರಿಬ್ಬರ ಮಧ್ಯೆ ಬಿರುಕು ಮೂಡಿದೆ ಎನ್ನುವುದು ಸುಸ್ಪಷ್ಟ.

ಅಗ್ನಿ ಶ್ರೀಧರ್ ಚುನಾವಣೆಗೂ ಮುನ್ನ ಆರ್‌ಎಸ್‌ಎಸ್ ವಿರುದ್ಧ ಜಾಗೃತಿ ಮೂಡಿಸಲು ರಾಷ್ಟ್ರೀಯ ದ್ರಾವಿಡ ಸಂಘ (ಆರ್‌ಡಿಎಸ್) ಅನ್ನು ಪ್ರಾರಂಭಿಸಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು.

ಈ ಹಿಂದೆ ಬಿಜೆಪಿ ಮತ್ತು ಸಂಘಪರಿವಾರದ ಕಟು ಟೀಕಾಕಾರರಾಗಿದ್ದ ನಟ ಚೇತನ್ ಅಹಿಂಸಾ, ಈಗೀಗ ಕಾಂಗ್ರೆಸ್ ಮತ್ತು ಇತರರನ್ನೂ ಟಾಸ್ಕ್’ಗೆ ತೆಗೆದುಕೊಳ್ಳುತ್ತಿದ್ದಾರೆ.ನಟ ಚೇತನ್ ಕುಮಾರ್ ಅವರು ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳ ವಿರುದ್ಧವೂ ಕಟುವಾಗಿಯೆ ಪ್ರತಿಕ್ರಿಯಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಚಿಂತನೆಗಳನ್ನು ನಿಜವಾಗಿ ಅರ್ಥಮಾಡಿಕೊಳ್ಳಲು ಭಗತ್ ಸಿಂಗ್ ಅವರ ‘ನಾನೇಕೆ ನಾಸ್ತಿಕ’ ಓದಲು ಪ್ರಿಯಾಂಕ್ ಖರ್ಗೆ ಚಕ್ರವರ್ತಿ ಸೂಲಿಬೆಲೆಗೆ ಸೂಚಿಸಿದ್ದಾರೆ. ಆದರೆ, ಇದೇ ಇತ್ತೀಚೆಗೆ ಇದೇ ಪ್ರಿಯಾಂಕ್ ಖರ್ಗೆ ಅವರು ‘ ದೇವರ ‘ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ಇದು ಕೂಡಾ ವಿಪರ್ಯಾಸ. ಬಹುಶಃ ಪ್ರಿಯಾಂಕಾ ಖರ್ಗೆ ಅವರು ಕೂಡ ಭಗತ್ ಸಿಂಗ್ ಕೃತಿಯನ್ನು ಓದಬೇಕು. ಬಿಜೆಪಿ ಮತ್ತು ಕಾಂಗ್ರೆಸ್ ಪಠ್ಯಪುಸ್ತಕಗಳು (ಹ್ಯುಮಾನಿಟೀಸ್ ಮತ್ತು ಸೋಶಲ್ ಸೈನ್ಸಸ್) ಎರಡೂ ದೋಷಪೂರಿತವಾಗಿವೆ ” ಎಂದು ತಮ್ಮ ಚೇತನ್ ಸೋಷಿಯಲ್ ಮಾಧ್ಯಮದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ರೈಲು ಬರುತ್ತಿದ್ದಂತೆ ಹಳಿಗೆ ತಲೆಕೊಟ್ಟ ವ್ಯಕ್ತಿ ಮಿಂಚಿನಂತೆ ಓಡಿ ಟ್ರಾಕ್’ಗೆ ಇಳಿದು ರಕ್ಷಿಸಿದ ಮಹಿಳಾ ಕಾನ್‌ಸ್ಟೇಬಲ್ !

You may also like

Leave a Comment