Home » ಮಗ ಗುಟ್ಕಾ ತಿಂದ ಎಂಬ ಕಾರಣಕ್ಕೆ ಖಾರ ಮಸಾಲೆ ರುಬ್ಬಿ ಮಗನ ಮುಖಕ್ಕೆ ಹಚ್ಚಿದ ತಾಯಿ !!

ಮಗ ಗುಟ್ಕಾ ತಿಂದ ಎಂಬ ಕಾರಣಕ್ಕೆ ಖಾರ ಮಸಾಲೆ ರುಬ್ಬಿ ಮಗನ ಮುಖಕ್ಕೆ ಹಚ್ಚಿದ ತಾಯಿ !!

0 comments

ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ಅದನ್ನು ಸರಿಯಾದ ಮಾರ್ಗದಲ್ಲಿ ತಿದ್ದಿ ಮುಂದೆ ನಡೆಸುವುದು ಪೋಷಕರ ಕರ್ತವ್ಯವಾಗಿರುತ್ತದೆ. ಆದರೆ ಇಲ್ಲೊಬ್ಬ ತಾಯಿ ಮಗ ಗುಟ್ಕಾ ತಿಂದ ಎಂದು ಖಾರ ಮಸಾಲೆ ರುಬ್ಬಿ ಆತನ ಮುಖಕ್ಕೆ ಹಚ್ಚಿದ ಘಟನೆಯೊಂದು ಬೆಂಗಳೂರಿನ ಸೋಮಸುಂದರ ನಗರದಲ್ಲಿ ನಡೆದಿದೆ.

ಮಗ ಗುಟ್ಕಾ ತಿಂದ ಎಂಬ ಕಾರಣಕ್ಕೆ ಖಾರ ಮಸಾಲೆ ಹಚ್ಚಿದಾಕೆಯನ್ನು ತಮ್ರೀನ್ ಎಂದು ಗುರುತಿಸಲಾಗಿದೆ. ತಮ್ರೀನ್, ಮಗ ಗುಟ್ಕಾ ತಿಂದ ಎಂದು ಮನೆಯಲ್ಲಿ ಖಾರ ಮಸಾಲೆ ಮಿಕ್ಸಿಯಲ್ಲಿ ರುಬ್ಬಿ ಹಚ್ಚಿದ್ದಾಳೆ. ನೋವು ತಾಳಲಾರದೆ ಬಾಲಕ ಕಣ್ಣೀರು ಹಾಕಿದರೂ ಬಿಡದೆ ಚಿತ್ರಹಿಂಸೆ ನೀಡಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದೆ.

ತಮ್ರೀನ್, ಮಗನ ಕಣ್ಣಿಗೆ ಮತ್ತು ಮುಖಕ್ಕೆ ಮಸಾಲೆ ಹಚ್ಚುತ್ತಿದ್ದಂತೆ ತಪ್ಪಾಯ್ತು ಎಂದು ಮಗ ಪರಿಪರಿಯಾಗಿ ಬೇಡಿಕೊಂಡರೂ, ತಮ್ರೀನ್ ಬಿಡದೆ ಮಸಾಲೆ ಹಚ್ಚಿದ್ದಾಳೆ. ಈ ಘಟನೆಯ ವೀಡಿಯೋವನ್ನು ಸ್ವತಃ ತಂದೆಯೇ ಸೆರೆ ಹಿಡಿದಿರುವುದಾಗಿ ವರದಿಯಾಗಿದೆ. ಅಲ್ಲದೆ ವೀಡಿಯೋದಲ್ಲಿ ತಮ್ರೀನ್ ಜೊತೆ ಪತಿ ಬೇಡ ಎಂದರು ಕೂಡ ಮಗನಿಗೆ ಚಿತ್ರಹಿಂಸೆ ನೀಡಿದ್ದು, ಪತಿಗೆ ಬೈಯುತ್ತಿರುವುದು ಕೂಡ ವೀಡಿಯೋದಲ್ಲಿ ಸೆರೆಯಾಗಿದೆ.

You may also like

Leave a Comment