Home » Puri: ಸಮುದ್ರದಲ್ಲಿ ಬಿದ್ದು ರಕ್ಷಣೆಗಾಗಿ ಬೊಬ್ಬಿಟ್ಟ ಸೌರವ್‌ಗಂಗೂಲಿ ಸಹೋದರ, ಆತನ ಪತ್ನಿ: ವಿಡಿಯೋ ವೈರಲ್‌

Puri: ಸಮುದ್ರದಲ್ಲಿ ಬಿದ್ದು ರಕ್ಷಣೆಗಾಗಿ ಬೊಬ್ಬಿಟ್ಟ ಸೌರವ್‌ಗಂಗೂಲಿ ಸಹೋದರ, ಆತನ ಪತ್ನಿ: ವಿಡಿಯೋ ವೈರಲ್‌

0 comments

Puri: ಕ್ರಿಕೆಟರ್‌ ಸೌರವ್‌ ಗಂಗೂಲಿ ಅವರ ಸಹೋದರ ಹಾಗೂ ಅವರ ಪತ್ನಿ ಪುರಿಯ ಬೀಚ್‌ನಲ್ಲಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ನೇಹಶಿಶ್‌ ಗಂಗೂಲಿ ಹಾಗೂ ಇವರ ಹೆಂಡತಿ ಅರ್ಪಿತಾ ಹಾಲಿಡೇ ಕಳೆಯಲೆಂದು ಒಡಿಶಾದ ಪುರಿ ಬೀಚ್‌ಗೆ ಬಂದಿದ್ದರು. ಈ ಸಮಯದಲ್ಲಿ ವಾಟರ್‌ ಸ್ಪೋರ್ಟ್ಸ್‌ ಗೇಮ್‌ನಲ್ಲಿ ಸ್ಪೀಡ್‌ ಬೋಟ್‌ ಆಡುವಾಗ ಅದು ಮಗುಚಿ ಬಿದ್ದಿದೆ. ಇಬ್ಬರೂ ನೀರಿನಲ್ಲಿ ಮುಳುಗುತ್ತಾ ರಕ್ಷಣೆಗೆ ಬೊಬ್ಬಿಟ್ಟಿದ್ದರೆ. ಕೂಡಲೇ ಲೈಫ್‌ಗಾರ್ಡ್ಸ್‌ ಈಜಿ ಹೋಗಿ ಸಮುದ್ರದಲ್ಲಿ ಬಿದ್ದ ಇಬ್ಬರನ್ನೂ ರಕ್ಷಣೆ ಮಾಡಿ, ದಡಕ್ಕೆ ಕರೆದುಕೊಂಡು ಬಂದಿದ್ದಾರೆ.

ಬೋಟ್‌ನಲ್ಲಿ 10 ಪ್ರವಾಸಿಗರು ಹೋಗಬೇಕಿತ್ತು. ಆದರೆ ಹಣದ ಆಸೆಗೆ 3,4 ಜನರನ್ನು ಸಮುದ್ರಕ್ಕೆ ಇಳಿಸಿದರು. ಗಾಳಿ, ಸಮುದ್ರದ ಅಲೆಗಳ ಹೊಡೆತದಿಂದ ಹಗುರವಾಗಿದ್ದ ಬೋಟ್‌ ಕೂಡಲೇ ಮಗುಚಿ ಬಿದ್ದಿದೆ. ಸಮಯಕ್ಕೆ ಸರಿಯಾಗಿ ಲೈಫ್‌ ಗಾರ್ಡ್ಸ್‌ ಬಂದಿಲ್ಲವೆಂದರೆ ನಾವು ಬದುಕುಳಿಯುತ್ತಿರಲಿಲ್ಲ. ಒಂದು ವೇಳೆ ಬೋಟ್‌ನಲ್ಲಿ ನಿಗದಿತ ಪ್ರವಾಸಿಗರು ಇದ್ದಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ. ಇಂತಹ ಬೋಟ್‌ ಕುರಿತು ಸಿಎಂ ಅವರಿಗೆ ಪತ್ರ ಬರೆದು, ಅದನ್ನು ಸ್ಥಗಿತ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

 

You may also like