Home » South Korea ವಿಮಾನ ಪತನ ಪ್ರಕರಣ – ಅಪಘಾತಕ್ಕೂ ಮೊದಲು ಅಚ್ಚರಿ ಸಂದೇಶ ಕಳುಹಿಸಿದ್ದ ಪ್ರಯಾಣಿಕ !! ನಿಜಕ್ಕೂ ಅಚ್ಚರಿ ಉಂಟು ಮಾಡುತ್ತೆ ಆತನ ಮಾತು

South Korea ವಿಮಾನ ಪತನ ಪ್ರಕರಣ – ಅಪಘಾತಕ್ಕೂ ಮೊದಲು ಅಚ್ಚರಿ ಸಂದೇಶ ಕಳುಹಿಸಿದ್ದ ಪ್ರಯಾಣಿಕ !! ನಿಜಕ್ಕೂ ಅಚ್ಚರಿ ಉಂಟು ಮಾಡುತ್ತೆ ಆತನ ಮಾತು

0 comments

South Korea: ಇತ್ತೀಚೆಗಷ್ಟೇ ಸಂಭವಿಸಿದ ಭೀಕರ ಕಜಕಿಸ್ತಾನ್ ವಿಮಾನ ಪತನ ಘಟನೆ ಮಾಸುವ ಮುನ್ನವೇ ಇಂದು (ಡಿ.29) ದಕ್ಷಿಣ ಕೊರಿಯಾದಲ್ಲಿ ಉಂಟಾದ ವಿಮಾನ ಪತನ ಅಕ್ಷರಶಃ ಆತಂಕಕ್ಕೆ ದೂಡಿದೆ. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಕೊರಿಯಾದ ಜೆಜು ಏರ್ ಫ್ಲೈಟ್​ನ 179 ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದು, ಇಬ್ಬರು ಮಾತ್ರ ಪವಾಡದಂತೆ ಬದುಕುಳಿದಿದ್ದಾರೆ. ಈ ದುರಂತದ ಕುರಿತು ಇದೀಗ ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿವೆ.

ಅಂತೆಯೇ ಈ ಪೈಕಿ ಒಂದು ಕುಟುಂಬವು, ವಿಮಾನ ಪತನವಾಗುವುದಕ್ಕೂ ಕೆಲವೇ ನಿಮಿಷಗಳ ಮುನ್ನ ವಿಮಾನದಲ್ಲಿದ್ದ ತಮ್ಮ ಸಂಬಂಧಿ ಒಬ್ಬರು ಹಕ್ಕಿಯೊಂದು ವಿಮಾನದ ರೆಕ್ಕೆಗೆ ಬಡಿದಿದೆ ಎಂದು ನುಡಿ ಸಂದೇಶ ರವಾನಿಸಿದ್ದ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಕುಟುಂಬ ಹಂಚಿಕೊಂಡ ಮಾಹಿತಿ ಏನು?
ನಮ್ಮವರು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರಿಗೆ ಯಾವ ಮುನ್ಸೂಚನೆ ಸಿಕ್ಕಿತೋ ಏನೋ ಗೊತ್ತಿಲ್ಲ. ಆದರೆ, ದುರಂತ ಸಂಭವಿಸುವ ಕೆಲವೇ ಕೆಲವು ನಿಮಿಷಗಳ ಮುಂಚಿತವಾಗಿ ನಮಗೊಂದು ಸಂದೇಶ ಕಳುಹಿಸಿದರು. ಅದರಲ್ಲಿ, ‘ನಾನು ಪ್ರಯಾಣಿಸುತ್ತಿರುವ ವಿಮಾನದ ರೆಕ್ಕೆಗೆ ಒಂದು ಹಕ್ಕಿ ಸಿಲುಕಿಕೊಂಡಿದೆ’ ಎಂದರು. ಈ ಸಂದೇಶದ ಬೆನ್ನಲ್ಲೇ ಮತ್ತೊಂದರಲ್ಲಿ, ‘ನನ್ನ ಕೊನೆಯ ಮಾತುಗಳನ್ನು ಹೇಳಿ ಮುಗಿಸಲೇ’ ಎಂದು ಕಳುಹಿಸಿದರು. ಇದಾದ ಕೆಲವೇ ಸಮಯದಲ್ಲಿ ವಿಮಾನ ಪತನವಾಯಿತು ಎಂದು ಹೇಳಿದ ಮೃತ ಪ್ರಯಾಣಿಕನ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಅಲ್ಲದೆ “ನಾನು ವಿಮಾನವು ಕೆಳಗಿಳಿಯುತ್ತಿರುವುದನ್ನು ಕಂಡೆ ಹಾಗೂ ಮಿನುಗುವ ದೀಪವನ್ನು ಕಂಡಾಗ ಅದಿನ್ನೇನು ಭೂಸ್ಪರ್ಶ ಮಾಡಬಹುದು ಎಂದು ನಾನು ಭಾವಿಸಿದ್ದೆ. ನಂತರ, ಆಕಾಶದಲ್ಲಿ ದೊಡ್ಡ ಸದ್ದಿನೊಂದಿಗೆ ಹೊಗೆ ಹರಡಿಕೊಂಡಿತು ಹಾಗೂ ಸರಣಿ ಸ್ಫೋಟದ ಸದ್ದುಗಳನ್ನು ನಾನು ಕೇಳಿದೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

You may also like

Leave a Comment