Shubhanshu Shukla : ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರುವ ಮೊದಲು ತಮ್ಮ ಪತ್ನಿ ಕಾಮ್ಮಾ ಜತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆಕ್ಸಿಯಮ್ -4 ಮಿಷನ್ ಉಡಾವಣೆಗೆ ಮುನ್ನ ಗಗನಯಾತ್ರಿ ಶುಭಾಂಶು ಶುಕ್ಲಾ ತಮ್ಮ ಪತ್ನಿ ಕಾಮ್ನಾ ಅವರಿಗಾಗಿ ಭಾವನಾತ್ಮಕ ಟಿಪ್ಪಣಿ ಬರೆದಿದ್ದಾರೆ.
ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದಗಳನ್ನು ಅರ್ಪಿಸಿದ ಶುಕ್ಲಾ, “ಅದ್ಭುತ ಸಂಗಾತಿಯಾಗಿದ್ದಕ್ಕೆ ಕಾಮ್ನಾಗೆ ವಿಶೇಷ ಧನ್ಯವಾದಗಳು” ಎಂದರು. “ನೀನಿಲ್ಲದೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ, ಆದರೆ ಮುಖ್ಯವಾಗಿ, ಇದ್ಯಾವುದೂ ಮುಖ್ಯವಾಗುವುದಿಲ್ಲ” ಎಂದು ಅವರು ಬರೆದಿದ್ದಾರೆ.
ಲಕ್ನೋದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್ -4 ಮಿಷನ್ ಬುಧವಾರ ಮಧ್ಯಾಹ್ನ IST 12:01 ಕ್ಕೆ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡಾವಣಾ ಸಂಕೀರ್ಣ 39A ನಿಂದ ಉಡಾವಣೆಗೊಳ್ಳಲಿದೆ. ಮೂಲತಃ ಜೂನ್ 22 ರಂದು ನಡೆಯಲು ನಿರ್ಧರಿಸಲಾಗಿತ್ತು, ಆದರೆ ಉಡಾವಣೆಯನ್ನು ಮುಂದೂಡಲಾಯಿತು ಮತ್ತು ಈಗ 2:31 am EDT (ಮಧ್ಯಾಹ್ನ 12 IST) ಗೆ ಗುರಿಪಡಿಸಲಾಗಿದೆ.
