Home » Mangaluru: ತನಿಖೆಯ ಮುನ್ನ ಫಾಝಿಲ್‌ ಕುಟುಂಬಕ್ಕೆ ಸ್ಪೀಕರ್‌ ಕ್ಲೀನ್‌ ಚಿಟ್‌- ಡಾ.ಭರತ್‌ ಶೆಟ್ಟಿ ವೈ

Mangaluru: ತನಿಖೆಯ ಮುನ್ನ ಫಾಝಿಲ್‌ ಕುಟುಂಬಕ್ಕೆ ಸ್ಪೀಕರ್‌ ಕ್ಲೀನ್‌ ಚಿಟ್‌- ಡಾ.ಭರತ್‌ ಶೆಟ್ಟಿ ವೈ

0 comments

Mangaluru: ಸ್ಪೀಕರ್‌ ಯು ಟಿ ಖಾದರ್‌ ಅವರು ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಫಾಝಿಲ್‌ ಕೊಲೆಗೆ ಪ್ರತೀಕಾರ ಅಲ್ಲ, ಪಾಝಿಲ್‌ ಕುಟುಂಬಸ್ಥರೇ ನನಗೆ ಈ ವಿಷಯ ತಿಳಿಸಿದ್ದಾರೆ ಎಂದು ಹೇಳಿದ್ದರು. ಆದರೆ ಇತ್ತ ತನಿಖೆಯ ವರದಿಯಲ್ಲಿ ಫಾಜಿಲ್‌ ಸಹೋದರ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಗೃಹ ಮಂತ್ರಿಗಳು, ಪೊಲೀಸ್‌ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಕೊಲೆ ಕೃತ್ಯದ ಪ್ರಧಾನ ಸೂತ್ರದಾರ ಸಹೋದರ ಎಂದು ತಿಳಿದು ಬಂದಿದೆ. ಈತನ ಜೊತೆ ಮಾತನಾಡಿ, ಕುಟಂಬಕ್ಕೆ ಕ್ಲೀನ್‌ ಚಿಟ್‌ ನೀಡಿದ್ದರು ಸ್ಪೀಕರ್‌ ಅವರು. ಈ ರೀತಿ ಮಾಡಿ ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡಿದ್ದು, ತಕ್ಷಣ ರಾಜೀನಾಮೆ ನೀಡಬೇಕು ಎಂದು ಶಾಸಕ ಡಾ.ಭರತ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಫಾಝಿಲ್‌ ಮನೆ ಮಂದಿ ಅಥವಾ ಕುಟುಂಬದವರು ಯಾರೂ ಈ ಘಟನೆಯಲ್ಲಿ ಭಾಗಿಯಾಗಿಲ್ಲ ಅಂತ ಮಾಧ್ಯಮಕ್ಕೆ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿಕೆ ನೀಡಿದ್ದು ಯಾವ ರೀತಿಯಲ್ಲಿ? ಫಾಝಿಲ್‌ ಸಹೋದರನ ಜೊತೆ ಮಾತನಾಡಿದ್ದೇನೆ ಅಂತ ಸ್ವತಃ ಖಾದರ್‌ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಆರೋಪಿಗಳ ಜೊತೆ ಪೊಲೀಸರು ಮಾತನಾಡಲು ಪೊಲೀಸರು ಅವಕಾಶ ನೀಡಿದ್ದು ಹೇಗೆ? ಆರೋಪಿಗಳನ್ನು ರಕ್ಷಿಸಲು ಸ್ಪೀಕರ್‌ ಮಧ್ಯ ಪ್ರವೇಶಿಸಿ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಯೇ?

ಸ್ಪೀಕರ್‌ ಅವರ ಪಾತ್ರ ಈ ಕೇಸಿನಲ್ಲಿ ಏನಿದೆ? ಈ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಸ್ಪೀಕರ್‌ ಅವರು ರಾಜೀನಾಮೆ ನೀಡುವುದು ಅಗತ್ಯ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

You may also like