Home » Mangaluru: ಮಂಗಳೂರು, ಉಡುಪಿಗೆ ಇನ್ಮುಂದೆ ಸ್ಪೆಷಲ್ ಫೋರ್ಸ್: ಜಿ.ಪರಮೇಶ್ವರ್ ಘೋಷಣೆ!

Mangaluru: ಮಂಗಳೂರು, ಉಡುಪಿಗೆ ಇನ್ಮುಂದೆ ಸ್ಪೆಷಲ್ ಫೋರ್ಸ್: ಜಿ.ಪರಮೇಶ್ವರ್ ಘೋಷಣೆ!

0 comments
Dr G parameshwar

Mangaluru: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬಳಿಕ ಮಂಗಳೂರಿಗೆ ಭೇಟಿ ನೀಡಿದ್ದ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.

ದ.ಕ ಮತ್ತು ಉಡುಪಿ ಜಿಲ್ಲೆಗೆ ಸ್ಪೆಷಲ್ ಫೋರ್ಸ್ ನಿಯೋಜನೆ ಮಾಡಲು ರಾಜ್ಯ ಸರ್ಕಾರ ಪ್ಲ್ಯಾನ್ ಮಾಡಿದೆ. ಇದು ಜಂಟಿ ನಕ್ಸಲ್ ಫೋರ್ಸ್‌ ಮಾದರಿಯಲ್ಲೇ ಇರಲಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಜಂಟಿ ಕಮ್ಯುನಲ್ ಫೋರ್ಸ್ ಸ್ಥಾಪನೆ ಮಾಡಲಾಗುತ್ತಿದ್ದು ಇದಕ್ಕೆ ಪ್ರತ್ಯೇಕ ಅಧಿಕಾರಿಗಳ ತಂಡವನ್ನು ಕೂಡಾ ನೇಮಿಸಲಾಗಿದೆ ಎಂದು ಹೇಳಿದರು.

You may also like