ಪಾಕ್ ಪರ ಬೇಹುಗಾರಿಕೆ ಆರೋಪದ ಮೇಲೆ ಮಲ್ಹೋತ್ರಾ ಬಂಧನ ಬೆನ್ನಲ್ಲೇ ಇದೀಗ ಪಾಕ್ ಗೆ 7 ಬಾರಿ ಭೇಟಿ ನೀಡಿದ್ದ ಮತ್ತೊರ್ವವನ್ನು ಬಂಧಿಸಲಾಗಿದೆ. ರಾಜಸ್ಥಾನದ ಬರಾಡ ಗ್ರಾಮದವನಾದ ಹಾಗೂ ಸರ್ಕಾರಿ ಉದ್ಯೋಗಿಯಾದ ಶಕುರ್ ಖಾನ್ ನನ್ನು ಬಂಧಿಸಿದ್ದು, ಪ್ರಾಥಮಿಕ ವಿಚಾರಣೆ ವೇಳೆ ಈತ ದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ.
ಅಲ್ಲದೇ ಪಾಕ್ ಗೆ ಹಲವು ಬಾರಿ ಕರೆ ಮಾಡಿದ ದಾಖಲೆ ಇದ್ದು, ತಾನು ಕೆಲ ವರ್ಷಗಳಿಂದ 7 ಬಾರಿ ಭೇಟಿ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಇನ್ನೂ ಈತ ಗುಪ್ತಚರ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಂತೆಯೇ ಮೊಬೈಲ್ ಮತ್ತು ಡಿಲಿಟಲ್ ಡಿವೈಸ್‌ಗಳಲ್ಲಿದ್ದ ಹಲವಾರು ಪ್ರಮುಖ ಫೈಲ್‌ಗಳನ್ನ ಡಿಲೀಟ್ ಮಾಡಿದ್ದು, ಸಧ್ಯಕ್ಕೆ ಆತನ ಮೊಬೈಲ್‌ನಿಂದ ಯಾವುದೇ ಸೂಕ್ಷ್ಮ ಮಾಹಿತಿಗಳು ರವಾನೆಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿರುವುದಿಲ್ಲ ಎಂದು ಹೇಳಲಾಗಿದೆ.ಸದ್ಯ ಈ ರೀತಿ ಆರೋಪದ ಮೇಲೆ ಬಂಧಿತರಾಗಿರುವವರ ಸಂಖ್ಯೆ 16 ದಾಟಿದೆ
