Home » Sri Lanka Farmers visit: ದೇವೇಗೌಡರ ಆಲೆಮನೆಗೆ ಶ್ರೀಲಂಕಾ ರೈತರ ಭೇಟಿ: ಬೆಲ್ಲ ತಯಾರಿಕೆ ಕುರಿತು ಮಾಹಿತಿ

Sri Lanka Farmers visit: ದೇವೇಗೌಡರ ಆಲೆಮನೆಗೆ ಶ್ರೀಲಂಕಾ ರೈತರ ಭೇಟಿ: ಬೆಲ್ಲ ತಯಾರಿಕೆ ಕುರಿತು ಮಾಹಿತಿ

0 comments
Sri Lanka Farmers visit

Sri Lanka Farmers visit: ಸಾವಯವ ಬೆಲ್ಲ ಉತ್ಪಾದನೆ ಮಾಡುವ ಸುಂಕಾತೊಣ್ಣೂರು ಗ್ರಾಮದ ದೇವೇಗೌಡ ಅವರ ಆಲೆಮನೆಗೆ ಶ್ರೀಲಂಕಾ ದೇಶದ ಹಲವು ರೈತರು ಶುಕ್ರವಾರ ಭೇಟಿಕೊಟ್ಟು ಸಾವಯವ ಕೃಷಿ ಹಾಗೂ ಬೆಲ್ಲ ತಯಾರಿಕೆ ಕುರಿತು ಮಾಹಿತಿ ಪಡೆದುಕೊಂಡರು. ರೈತ ದೇವೇಗೌಡ ಅವರ ಆಲೆಮನೆಗೆ ಭೇಟಿಕೊಟ್ಟು ಶ್ರೀಲಂಕಾ ದೇಶದ ರೈತರಾದ ರಾಣಿಯಮ್ಮ, ಅನುಕ ಹಾಗೂ ಶ್ರಮಿಳಾ ಸೇರಿದಂತೆ ಸುಮಾರು 13ಕ್ಕೂ ಅಧಿಕ ಮಂದಿ ರೈತರು ಸಾಯವಯ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆದು ಬಳಿಕ ಸಾವಯವ ಪದ್ದತಿಯಲ್ಲಿಯೇ ಬೆಲ್ಲ ಉತ್ಪಾದನೆ ಮಾಡಿ ಮಾರಾಟ ಮಾಡುವ ಮೂಲಕ ರೈತ ದೇವೇಗೌಡ ಅವರು ಈ ಭಾಗದಲ್ಲಿ ಸಾವಯವ ಕೃಷಿಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತಹ ರೈತ ದೇವೇಗೌಡರ ಆಲೆಮನೆಗೆ ಆಗಮಿಸಿ ಶ್ರೀಲಂಕಾ ರಾಷ್ಟçದ ರೈತರು ದೇವೇಗೌಡ ಅವರೊಂದಿಗೆ ಸುಮಾರು ಎರಡು ಗಂಟೆಗೂ ಅಧಿಕ ಕಾಲ ಸಾವಯವ ಕೃಷಿ, ಬೆಲ್ಲ ತಯಾರಿಕೆ ಹಾಗೂ ಮಾರುಕಟ್ಟೆಯ ಬಗ್ಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.

ಆಲೆಮನೆಯಲ್ಲಿ ಸಾವಯವ ಪದ್ದತಿಯಲ್ಲಿ ಯಾವುದೇ ರಾಸಾಯನಿಕ ಮಿಶ್ರಣ ಮಾಡಿದೆ, ಬೆಲ್ಲ ತಯಾರಿಕೆ ಮಾಡುವುದು ಹೇಗೆ? ಬೆಲ್ಲ ತಯಾರಿಸಿ ಬಳಿಕ ಸಂರಕ್ಷಣೆ ಹಾಗೂ ಮಾರಾಟ ಮಾಡಿದ ವಿಧಾನವನ್ನು ವೀಕ್ಷಣೆ ಮಾಡಿ, ಬಳಿಕ ಸಾವಯವ ಬೆಲ್ಲ ಸವಿದ ರೈತರು ದೇವೇಗೌಡರ ಸಾವಯವ ಕೃಷಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಲಂಕಾ ರಾಷ್ಟçದ ರೈತರಿಗೆ ಮಾಹಿತಿ ನೀಡಿದ ಅವರು ಆಲೆಮನೆಯ ಬಳಿಯೇ ಶ್ರೀಲಂಕಾ ದೇಶದ ರೈತರಿಗೆ ಹಿಂದೂ ಸಂಪ್ರದಾಯದAತೆ ಬಾಲೆ ಎಲೆಯಲ್ಲಿ ಸಸ್ಯಹಾರಿ ಊಟ ಮಾಡಿಸಿದರು. ನಂತರ ದೇವೇಗೌಡರ ಪತ್ನಿ ಕೆಂಪಮ್ಮ ಅವರು ಶ್ರೀಲಂಕಾ ದೇಶದ ರೈತ ಮಹಿಳೆಯರಿಗೆ ಹಿಂದೂ ಸಂಪ್ರದಾಯದAತೆ ಅರಿಸಿಣ, ಕುಂಕುಮ, ಬಳೆ, ಹೂ, ರವಿಕೆ ಪೀಸ್ ಹಾಗೂ ತೆಂಗಿನ ಕಾಯಿಕೊಟ್ಟು ಅಭಿನಂಧಿಸಿದರು. ರೈತರ ದೇವೇಗೌಡರ ಸಾವಯವ ಕೃಷಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಲಂಕಾ ರೈತರು ಭತ್ತ ಬೆಳೆಯುವುದಕ್ಕೆ ಪ್ರಸಿದ್ದಿ ಪಡೆದಿರುವ ಮಂಡ್ಯ ತಾಲೂಕಿನ ಶಿವಳ್ಳಿ ಬೋರೇಗೌಡರ ಜಮೀನಿಗೆ ತೆರಳಿದರು.

ಇದೇವೇಳೆ ಫಸ್ಟ್ ಅರ್ಥ್ ಪೌಂಡೇಷನ(ಪ್ರಥಮ ಭೂಮಿ)ನ ಕಿರಣ್‌ಪ್ರಕಾಶ್ ಹಾಗೂ ಎಂ.ಪಿ.ಗAಗಾಧರ್ ಅವರು ನೈಸರ್ಗಿಕ ಕೃಷಿ ಬೇಸಾಯ ಪದ್ದತಿಯ ಬಗ್ಗೆ ಮಾಹಿತಿ ನೀಡಿದರು. ಸಾವಯವ ಕೃಷಿಕ ರೈತ ದೇವೇಗೌಡ ಮಾತನಾಡಿ, ಸಾವಯವ ಕೃಷಿ, ಸಾವಯವ ಆಹಾರಕ್ಕೆ ಸಾವಿಲ್ಲ, ನಾವುಗಳು ಹಣದಾಸೆಗಾಗಿ ರಾಸಾಯನಿಕ ಕೃಷಿ ಮೂಲಕ ಉತ್ಪಾದನೆ ಮಾಡುತ್ತಿರುವ ಆಹಾರ ನಮಗೆ ವಿಷವಾಗಿ ಪರಿಣಮಿಸಿದೆ. ನಮ್ಮ ಆಹಾರ ಔಷಧ ಆಗಬೇಕೆ ಹೊರತು ವಿಷ ವಾಗಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ಭೂಮಿಯ ಒಳಗಡೆ ಸಿಗುವಂತಹ ಪೆಟ್ರೂಲ್, ಡಿಸೇಲ್ ಸೇರಿದಂತೆ ಇತರೆ ಪದಾರ್ಥಗಳು ವಿಷವಾಗಿವೆ. ಭೂಮಿ ಮೇಲೆ ಸಿಗುವುದು ನಮಗೆ ಅಮೃತ. ಆದರೆ, ನಾವು ಭೂಮಿ ಒಳಗೆ ಸಿಗುವುದನ್ನು ಪಡೆದು ಮತ್ತೆ ವಿಷವನ್ನು ಭೂಮಿಗೆ ನೀಡುತ್ತಿದ್ದೇವೆ ಇದರಿಂದಾಗಿಯೇ ಭೂಮಿ ಮನಗೆ ವಿಷ ನೀಡುತ್ತಿದ್ದಾಳೆ. ಬಿಳಿ ಆಹಾರ ಪದಾರ್ಥಗಳು ಸಂಪೂರ್ಣ ವಿಷಕಾರಿಯಾಗಿದೆ. ಹಾಗಾಗಿ ಬಿಳಿ ಆಹಾರ ಪದಾರ್ಥ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು. ನಾವೆಲ್ಲರು ಭೂಮಿಯನ್ನು ಸಂರಕ್ಷಣೆ ಮಾಡಬೇಕಾಗಿದೆ. ಭೂಮಿಗೆ ಹೆಚ್ಚಾಗಿ ರಾಸಾಯನಿಕ ಬಳಕೆ ಮಾಡುವುದನ್ನು ನಿಲ್ಲಿಸಬೇಕಾಗಿದೆ. ಭೂಮಿ ರಕ್ಷಣೆ ಮಾಡಿದೆ

ನಮ್ಮನ್ನ ಭೂಮಿ ರಕ್ಷಿಸುತ್ತದೆ. ಹಾಗಾಗಿ ಸಾಧ್ಯವಾದಷ್ಟು ಎಲ್ಲರು ಸಾವಯಕ ಕೃಷಿಯತ್ತ ಮುಖಮಾಡಬೇಕು ಎಂದು ತಿಳಿಸಿದರು. ಸಂದರ್ಭದಲ್ಲಿ ಫಸ್ಟ್ ಅರ್ಥ್ ಪೌಂಡೇಷನ್ (ಪ್ರಥಮ ಭೂಮಿ)ನ ಕಿರಣ್‌ಪ್ರಕಾಶ್ ಹಾಗೂ ಎಂ.ಪಿ.ಗAಗಾಧರ್ ಸೇರಿದಂತೆ ಹಲವರು ಹಾಜರಿದ್ದರು.

You may also like

Leave a Comment