Home » Pejawara Shree : ‘ಸನಾತನ’ ಧರ್ಮದ ಕಿಡಿ ಹೊತ್ತಿದರೆ ರಾಜ್ಯ ಏನಾಗುತ್ತೆ ಗೊತ್ತಾ ?! ಶಾಕಿಂಗ್ ಹೇಳಿಕೆ ಕೊಟ್ಟ ಪೇಜಾವರ ಶ್ರೀಗಳು !!

Pejawara Shree : ‘ಸನಾತನ’ ಧರ್ಮದ ಕಿಡಿ ಹೊತ್ತಿದರೆ ರಾಜ್ಯ ಏನಾಗುತ್ತೆ ಗೊತ್ತಾ ?! ಶಾಕಿಂಗ್ ಹೇಳಿಕೆ ಕೊಟ್ಟ ಪೇಜಾವರ ಶ್ರೀಗಳು !!

1 comment
Pejawara Shree

Pejawara Shree : ಧಾರವಾಡ ನಗರದಲ್ಲಿ ಶುಕ್ರವಾರ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ (Pejawara Shree) ಅವರು, ಸನಾತನ ಧರ್ಮದ ಕುರಿತು ಮಾತನಾಡಿದ್ದಾರೆ‌.

ಸನಾತನ ಧರ್ಮದ ಕಿಡಿ ಹೊತ್ತಿದರೆ ರಾಜ್ಯ ಏನಾಗುತ್ತೆ ಗೊತ್ತಾ ?!
ಸನಾತನ ಧರ್ಮ ವಿರೋಧಿಸುವ ಮಟ್ಟಕ್ಕೆ ಕೈ ಹಾಕುವುದು ಸರಿಯಲ್ಲ, ಒಮ್ಮೆ ಕಿಡಿ ಹೊತ್ತಿದರೆ ಶಾಂತಿ ಬೇಗ ಸಿಗದು ಇದಕ್ಕೆ ಮಣಿಪುರ ರಾಜ್ಯವೇ ಉದಾಹರಣೆಯಾಗಿದೆ ಎಂಬ ಹೇಳಿಕೆ ನೀಡಿದ್ದಾರೆ.

ಮನೆ ಮನೆಗೆ ಕಲ್ಲು ಹೊಡೆಯುವುದು, ಕತ್ತಿ ತಗೊಂಡು ಹೊಡೆಯೋದು ಸಣ್ಣ ವಿಚಾರವಾ? ಇದನ್ನು ಯಾರೂ ಸಹ ಸಣ್ಣ ವಿಚಾರ ಎಂಬುದಾಗಿ ತಿಳಿಯಬಾರದು. ಗಲಭೆಗಳನ್ನು ಮೂಲದಲ್ಲಿಯೇ ಹತ್ತಿಕ್ಕಬೇಕು. ಹೀಗಾಗಿ ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳು ಒಂದು ಪಕ್ಷಕ್ಕೆ ಸೀಮಿತವಲ್ಲ. ಸಮಾಜದ ಎಲ್ಲರ ಸುಖ ಶಾಂತಿಗೆ ಬೇಕಾದ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.

ನಮ್ಮ ಸಂತೋಷದ ಪ್ರಯತ್ನ ಮತ್ತೊಬ್ಬರ ದು:ಖವಾಗಬಾರದು. ಎಲ್ಲರೂ ಸಂತೋಷದಿಂದ ಇರಬೇಕು. ಎಲ್ಲರೂ ಸಮಾನರು ಎಲ್ಲವೂ ನಮ್ಮದು ಎಂಬ ಭಾವನೆ ಬರಬೇಕು. ಎಲ್ಲರ ಸುಖವನ್ನು ಬಯಸುವ ಕಾರ್ಯ ಆಗಬೇಕು. ನಾವು ಇನ್ನೊಬ್ಬರ ಸುಖ ಬಯಸಿದರೆ ಮಾತ್ರ ಸುಖವಾಗಿರಲು ಸಾಧ್ಯವಿದೆ. ಧರ್ಮ ಎಂದರೆ ಸಮಾಜವನ್ನು ನಿರಂತರ ಮುನ್ನಡೆಸುವ ಬದುಕಿನ ಸೂತ್ರವಾಗಿದೆ. ಎಲ್ಲರೂ ಸುಖ ಸಂತೋಷದಿಂದ ಇರಬೇಕು. ಅದಕ್ಕಾಗಿ ಅಳವಡಿಸಿಕೊಳ್ಳವೇಕಾದ ನೀತಿ ನಿಯಮವೇ ಸನಾತನ ಧರ್ಮ ಎಂದರು.

 

ಇದನ್ನು ಓದಿ: KSRTC: ಇನ್ಮುಂದೆ ಈ ಬಸ್ ಗಳಲ್ಲಿ ರಾಜ್ಯದಲ್ಲಿ ಮಹಿಳೆರಿಗೆ ಉಚಿತ ಪ್ರಯಾಣ ಇರೋದಿಲ್ಲ !!

You may also like

Leave a Comment