Home » Mangalore: ಶ್ರೀದೇವಿ ಕಲ್ಲಡ್ಕ ಅವರಿಗೆ ಮಂಗಳೂರು ವಿ.ವಿ.ಯಿಂದ ಡಾಕ್ಟರೇಟ್ ಪದವಿ

Mangalore: ಶ್ರೀದೇವಿ ಕಲ್ಲಡ್ಕ ಅವರಿಗೆ ಮಂಗಳೂರು ವಿ.ವಿ.ಯಿಂದ ಡಾಕ್ಟರೇಟ್ ಪದವಿ

by ಹೊಸಕನ್ನಡ
0 comments

Mangalore: ಶ್ರೀದೇವಿ ಕಲ್ಕಡ್ಕ ಇವರು ಡಾ. ಧನಂಜಯ ಕುಂಬ್ಳೆ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ, ಮಂಗಳೂರು (Mangalore) ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಗೆ ಸಲ್ಲಿಸಿದ ‘ಶ್ರೀದೇವಿ ಮಹಾತ್ಮೆʼ ಯಕ್ಷಗಾನ ಪ್ರಸಂಗ ಮತ್ತು ಪ್ರಯೋಗ’ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.

ಶ್ರೀದೇವಿ ಕಲ್ಲಡ್ಕ ಸಂಗೀತ, ಭರತನಾಟ್ಯ ಹಾಗೂ ಯಕ್ಷಗಾನ ಕಲಾವಿದೆಯಾಗಿದ್ದು, ದೂರದರ್ಶನ ಮತ್ತು ಆಕಾಶವಾಣಿಯ ಗ್ರೇಡೆಡ್ ಕಲಾವಿದೆಯೂ ಆಗಿದ್ದಾರೆ. ಇವರು ಕಲ್ಲಡ್ಕದ ತಿರುಮಲೇಶ್ವರ ಭಟ್ ಸರಸ್ವತಿ ದಂಪತಿ ಸುಪುತ್ರಿಯಾಗಿದ್ದು, ರಾಘವೇಂದ್ರ ಕೆ.ಕೆ. ಪತ್ನಿಯಾಗಿರುವ ಇವರು ಭಾಗವತ ಚಿನ್ಮಯ ಕಲ್ಲಡ್ಕ ಇವರ ಸಹೋದರಿಯಾಗಿದ್ದಾರೆ. ಇವರು ಇತ್ತೀಚೆಗೆ ದೆಹಲಿಯ ಜೆಎನ್ ಯು ವಿವಿಯ ಯಕ್ಷಗಾನ ಸಂಬಂಧಿ ಸಂಶೋಧನಾ ಯೋಜನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: Indian Railway: ಯಶವಂತಪುರ-ತಾಳಗುಪ್ಪ ವಿಶೇಷ ರೈಲು ಸಂಚಾರ ಸೇವೆ!

You may also like