SSLC Exam 2025: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2025 ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಪ್ರವೇಶ ಪತ್ರಗಳನ್ನು ಮಂಡಳಿಯ ವೆಬ್‌ಸೈಟ್ kseab.karnataka.gov.in ನಲ್ಲಿ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಮಂಡಳಿ ಪ್ರಕಟ ಮಾಡಿದೆ.
ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು 2025 ರ ಮಾರ್ಚ್ 20ರಿಂದ ಪ್ರಾರಂಭವಾಗಿ 2025 ರ ಎಪ್ರಿಲ್ 2 ಕ್ಕೆ ಕೊನೆಗೊಳ್ಳುತ್ತದೆ.
ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡುವ ಮೂಲಕ ಶಾಲಾ ಅಧಿಕಾರಿಗಳು ವಿತರಿಸಬೇಕು. ಶಾಲಾ ಅಧಿಕಾರಿಗಳು ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲನೆ ಮಾಡಬೇಕು.
ವಿದ್ಯಾರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಛಾಯಾಚಿತ್ರ, ಸಹಿ ಮತ್ತು ಇತರ ತಿದ್ದುಪಡಿಗಳಿಗೆ ಸಂಬಂಧಪಟ್ಟಂತೆ ಬದಲಾವಣೆಗಳ ಅಗತ್ಯವಿದ್ದರೆ, ಪ್ರತಿ ತಿದ್ದುಪಡಿಗೆ ರೂ.100/-ದಂಡ ಶುಲ್ಕ ಮತ್ತು ಮಾಧ್ಯಮ ತಿದ್ದುಪಡಿಗೆ ರೂ.500/- ದಂಡ ಶುಲ್ಕವನ್ನು 2025 ರ ಮಾರ್ಚ್ 17 ರ ಮೊದಲು ಪಾವತಿ ಮಾಡಬೇಕು.
