Home » ಮೇ ಎರಡನೇ ವಾರದಲ್ಲೇ ಹೊರಬೀಳಲಿದೆ SSLC ಫಲಿತಾಂಶ!

ಮೇ ಎರಡನೇ ವಾರದಲ್ಲೇ ಹೊರಬೀಳಲಿದೆ SSLC ಫಲಿತಾಂಶ!

0 comments

ವಿಜಯಪುರ: ರಾಜ್ಯದಾದ್ಯಂತ ಇಂದು ಎಸ್ಸೆಸೆಲ್ಸಿ ಪರೀಕ್ಷೆ ಮುಕ್ತಾಯವಾಗಿದ್ದು,ಮೇ ಎರಡನೇ ವಾರದಲ್ಲಿ ಫಲಿತಾಂಶ ಬರಲಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

ನಾಳೆಯಿಂದ ಕೀ ಉತ್ತರಗಳು, ಉತ್ತರಗಳಿಗೆ ಆಕ್ಷೇಪಣೆ ಕರೆಯುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳು
ಆರಂಭವಾಗುತ್ತವೆ. ಏಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗುತ್ತದೆ.ಇನ್ನು ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಜೂನ್ 4ನೇ ವಾರದಲ್ಲಿ ಪೂರಕ ಪರೀಕ್ಷೆ ನಡೆಯಲಿದೆ ಎಂದು ವಿಜಯಪುರದಲ್ಲಿ ಶಿಕ್ಷಣ ಸಚಿವ ಬಿ. ನಾಗೇಶ್ ಮಾಹಿತಿ ನೀಡಿದ್ದಾರೆ.

You may also like

Leave a Comment