Home » SSLC: ಮುಂದಿನ ವರ್ಷದಿಂದ ಎರಡು ಬಾರಿ ನಡೆಯುತ್ತೆ SSLC ಪರೀಕ್ಷೆ!!

SSLC: ಮುಂದಿನ ವರ್ಷದಿಂದ ಎರಡು ಬಾರಿ ನಡೆಯುತ್ತೆ SSLC ಪರೀಕ್ಷೆ!!

0 comments

SSLC: ಮುಂದಿನ ಶೈಕ್ಷಣಿಕ ವರ್ಷದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎರಡು ಬಾರಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಹೌದು, 2026ರಿಂದ CBSE ಬೋರ್ಡ್​​ 10 ನೇ ತರಗತಿಯ ಪರೀಕ್ಷಾ (10th Exam) ವ್ಯವಸ್ಥೆಯನ್ನು ವರ್ಷಕ್ಕೆ ಎರಡು ಬಾರಿ (Twice a year) ಜಾರಿಗೆ ತರಲು ನಿರ್ಧರಿಸಿದೆ.

ಫೆಬ್ರವರಿ (February) ಮತ್ತು ಮೇ (May) ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಇಂದು ಸರ್ಕಾರ ತಿಳಿಸಿದ್ದು ಫೆಬ್ರವರಿಯಲ್ಲಿ ಒಂದು ಹಂತದ (First Stage) ಪರೀಕ್ಷೆಯನ್ನ ನಡೆಸಲಿದೆ. ನಂತರ ಮೇ ತಿಂಗಳಲ್ಲಿ ನಡೆಯುವ ಪರೀಕ್ಷೆಯನ್ನು ಮರುಪರೀಕ್ಷೆಯಾಗಿ (Retest) ಬಳಸಬಹುದು ಎಂದು ಹೇಳಿದೆ.

ಇನ್ನೂ 2026 ರಿಂದ ಹತ್ತನೇ ತರಗತಿ ಪರೀಕ್ಷೆಯನ್ನ ವರ್ಷಕ್ಕೆ ಎರಡು ಬಾರಿ ನಡೆಸಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಕರಡು ಮಾನದಂಡಗಳನ್ನು ಅನುಮೋದಿಸಿದ್ದು, ಈ ಬಗ್ಗೆ ಆಯ್ಕೆಯನ್ನ ವಿದ್ಯಾರ್ಥಿಗಳಿಗೆ ಬಿಟ್ಟಿದ್ದಾರೆ. ಕರಡು ಮಾರ್ಗಸೂಚಿಗಳನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಬಿಡುಗಡೆ ಮಾಡಲಾಗಿದೆ. ಮಾರ್ಚ್ 9, 2025 ರವರೆಗೆ ಸಾರ್ವಜನಿಕರಿಂದ ಮತ್ತು ಪೋಷಕರು, ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ.

ಯಾವಾಗ ಪರೀಕ್ಷೆ?
ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಹಂತದ ಪರೀಕ್ಷೆಗಳು ಫೆಬ್ರವರಿ 17 ರಿಂದ ಮಾರ್ಚ್ 6, 2026 ರವರೆಗೆ ನಡೆಯಲಿದೆ. ಮತ್ತು ಎರಡನೇ ಹಂತವು ಮೇ 5 ರಿಂದ ಮೇ 20, 2026 ರವರೆಗೆ ನಡೆಯಲಿವೆ. ಎರಡೂ ಪರೀಕ್ಷೆಗಳು ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡಿರುತ್ತವೆ. ಈ ಹೊಸ ವ್ಯವಸ್ಥೆಯೊಂದಿಗೆ ಯಾವುದೇ ಪೂರಕ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಎಂದು CBSE ಸ್ಪಷ್ಟಪಡಿಸಿದೆ.

ಒಂದೇ ಬಾರಿ ನಡೆಯುತ್ತೆ ಪ್ರಾಯೋಗಿಕ ಪರೀಕ್ಷೆ!
ಪ್ರಾಯೋಗಿಕ ಮತ್ತು ಆಂತರಿಕ ಮೌಲ್ಯಮಾಪನ ಪ್ರತಿ ಶೈಕ್ಷಣಿಕ ವರ್ಷಕ್ಕೆ ಒಮ್ಮೆ ಮಾತ್ರ ನಡೆಸಲಾಗುತ್ತದೆ. ಅಂತಿಮ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರವನ್ನು ಮೇ ಪರೀಕ್ಷೆಯ ನಂತರ ನೀಡಲಾಗುತ್ತದೆ ಮತ್ತು ಇದರಲ್ಲಿ ವಿದ್ಯಾರ್ಥಿಗಳು ಎರಡು ಅವಧಿಯ ಪರೀಕ್ಷೆ ಬರೆದಿದ್ದರೆ ಪ್ರತಿ ವಿಷಯದಲ್ಲೂ ಉತ್ತಮ ಅಂಕಗಳನ್ನು ಒಳಗೊಂಡಿರುತ್ತದೆ.

You may also like