SSLC Passing Mark: SSLCಯಲ್ಲಿ ಉತ್ತೀರ್ಣರಾಗಲು ಕೇವಲ ಶೇಕಡಾ 33 ರಷ್ಟು ಮಾರ್ಕ್ಸ್ ಸಾಕು ವಿಚಾರ ಸಂಬಂಧ ಶಿಕ್ಷಣ ಇಲಾಖೆ ನಿರ್ಧಾರಕ್ಕೆ ಶಿಕ್ಷಣ ತಜ್ಞರ ಹಿರಿಯ ಸಾಹಿತಿಗಳ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಅವೈಜ್ಞಾನಿಕ ಪ್ರಯೋಗ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಿಕ್ಷಣ ಇಲಾಖೆಯ ಅವೈಜ್ಞಾನಿಕ ನಿರ್ಧಾರವನ್ನು ಹಿಂಪಡೆಯಲು ಆಗ್ರಹ ಪಡಿಸಲಾಗಿದೆ.
ಸದ್ಯ ಆಕ್ಷೇಪಣೆ ಸಲ್ಲಿಸಲು ಶಿಕ್ಷಣ ಇಲಾಖೆ ಅವಕಾಶ ಕೊಟ್ಟ ಅವಧಿಯಲ್ಲೇ ಸಾಕಷ್ಟು ವಿರೋಧ ಬಂದಿದ್ದು, ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಶಿಕ್ಷಣತಜ್ಞರಾದ ನಿರಂಜನಾರಾಧ್ಯ, ಹಿರಿಯ ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಸೇರಿದಂತೆ ಅನೇಕರಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಕೇಂದ್ರೀಯ ಶಾಲಾ ಪರೀಕ್ಷೆಗಳ ಮಾದರಿಯಲ್ಲಿ ತೇರ್ಗಡೆಗಾಗಿ 33 ಅಂಕಗಳನ್ನು ನಿಗದಿ ಕ್ರಮವು ಶಿಕ್ಷಣದ ಗುಣಮಟ್ಟಕ್ಕೆ ಮಾರಕವಾಗಿದೆ. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ತಿರಸ್ಕರಿಸಿ, ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಸಮಿತಿಯನ್ನು ರಚನೆ ಮಾಡಿ. ಇದೀಗ ಕೇಂದ್ರೀಯ ಶಾಲಾ ಪರೀಕ್ಷೆ ಮಾದರಿಯನ್ನು ಅನುಸರಿಸುವುದು ತಾತ್ವಿಕ ವಿಪರ್ಯಾಸ ಅಂತ ಶಿಕ್ಷಣತಜ್ಞರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: Uppinangady: ಉಪ್ಪಿನಂಗಡಿ: ವಿವಾಹಿತ ಮಹಿಳೆ ನಾಪತ್ತೆ
