Home » SSLC Result: ಮೇ 2ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ?

SSLC Result: ಮೇ 2ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ?

0 comments
Open Book Exam

SSLC Result: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಮೇ 2ರಂದು ಹಾಗೂ ಸಿಇಟಿ ಫಲಿತಾಂಶ ಮೇ 3ನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.

Murder: ಲಿವ್‌ ಇನ್‌ ಸಂಗಾತಿಯನ್ನು ಕೊಲೆಗೈದು ಶವವನ್ನು ಮಂಚದ ಬಾಕ್ಸ್‌ನಲ್ಲಿ ತುಂಬಿಟ್ಟ ಪ್ರಿಯಕರ!

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ಕಂಪ್ಯೂಟರ್‌ ದಾಖಲೀಕರಣ ಪ್ರಗತಿಯಲ್ಲಿದೆ. ಮೇ.2 ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಲು ಮಂಡಳಿ ಚಿಂತನೆ ಮಾಡಿದೆ. ಎಂಜಿನಿಯರಿಂಗ್‌ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಮೇ ಮೂರನೇ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಎಂದು ಮೂಲಗಳು ತಿಳಿಸಿರುವ ಕುರಿತು ವರದಿಯಾಗಿದೆ.

Accident: ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ವ್ಯಾನ್‌; 12 ಜನ ಸಾವು!

ಏ.16 ಮತ್ತು 17ರಂದು ನಡೆದಿರುವ ಸಿಇಟಿ ಪರೀಕ್ಷೆಯಲ್ಲಿ 3.30 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಪರೀಕ್ಷೆ ಬರೆದಿದ್ದರು. ಸಿಇಟಿ ಫಲಿತಾಂಶಕ್ಕೂ ಮೊದಲು ರಾಜ್ಯ ಪಠ್ಯಕ್ರಮಗಳ ದ್ವಿತೀಯ ಪಿಯುಸಿ ಪರೀಕ್ಷೆ-2 ರ ಫಲಿತಾಂಶ ಪ್ರಕಟವಾಗಬೇಕಿದೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಬೇಕಿದೆ. ಬಿಎಸ್‌ಸಿ ಕೃಷಿ ಪಡೆಯಲು ಇಚ್ಛಿಸುವ ಫಲಿತಾಂಶವನ್ನು ಕೃಷಿ ವಿಶ್ವವಿದ್ಯಾಲಯಗಳು ಕೆಇಎಗೆ ನೀಡಬೇಕಿದೆ. ನಂತರ ಕೆಇಎ ಸಿಇಟಿ ಮತ್ತು ಉಳಿದ ಪರೀಕ್ಷೆಗಳ ತಲಾ ಶೇ. 50ರಷ್ಟು ಅಂಕಗಳನ್ನು ಪರಿಗಣಿಸಿ ಸಿಇಟಿ ಫಲಿತಾಂಶ ಪ್ರಕಟಿಸಲಿದೆ.

You may also like