Home » SSLC Results 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೀಘ್ರ ಪ್ರಕಟ, ದಿನಾಂಕ ನಿಗದಿಪಡಿಸಿಲ್ಲ-ಮಂಡಲಿ

SSLC Results 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೀಘ್ರ ಪ್ರಕಟ, ದಿನಾಂಕ ನಿಗದಿಪಡಿಸಿಲ್ಲ-ಮಂಡಲಿ

0 comments
SSLC Exam Result

SSLC Results 2024: ಎಸ್‌ಎಸ್‌ಎಲ್‌ಸಿ ಫಲಿತಾಂಶದ ಕುರಿತು ಮೇ. 8 ರಂದು ಬೆಳಿಗ್ಗೆ 10 ಗಂಟೆಗೆ ಫಲಿತಾಂಶ ಪ್ರಕಟ ಮಾಡುವುದಾಗಿ ಮಂಡಲಿ ಪ್ರಕಟ ಮಾಡಲಿದೆ ಎನ್ನುವ ಮಾಹಿತಿಯೊಂದು ಹರಿದಾಡುತ್ತಿದೆ. ಇದೀಗ ಈ ಕುರಿತು ಮಂಡಲಿ ಅಧ್ಯಕ್ಷರಾಗಿರುವ ಐಎಎಸ್‌ ಅಧಿಕಾರಿ ಎನ್.‌ ಮಂಜುಶ್ರೀ ಅವರು ಸ್ಪಷ್ಟನೆ ನೀಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಮುಗಿದಿದ್ದು, ಕೊನೆ ಹಂತದ ಚಟುವಟಿಕೆಗಳು ನಡೆಯುತ್ತಿದೆ. ಫಲಿತಾಂಶ ಈ ವಾರದಲ್ಲಿ ಇಲ್ಲದೇ ಮುಂದಿನ ವಾರದಲ್ಲಿ ಪ್ರಕಟವಾಗಬಹುದು ಎನ್ನಲಾಗುತ್ತಿದೆ.

ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಮಾಪನ ಮಂಡಲಿಯು ಸಾಮಾಜಿಕ ಮಾಧ್ಯಮದಲ್ಲಿ ಫಲಿತಾಂಶದ ದಿನಾಂಕ, ಸಮಯ ಹಾಗೂ ಮರುಮೌಲ್ಯಮಾಪನದ ಮಾಹಿತಿ ಹರಿದಾಡುತ್ತಿದ್ದು, ಮಂಡಲಿ ಸ್ಪಷ್ಟನೆ ನೀಡಿದ್ದು, ಈಗ ಹರಿದಾಡುತ್ತಿರುವ ದಿನಾಂಕಗಳು ಫೇಕ್‌, ಫಲಿತಾಂಶದ ದಿನಾಂಕ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಖಚಿತಪಡಿಸಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸ್ ಗೆ ಬಿಗ್ ಟ್ವಿಸ್ಟ್; ದೂರುದಾರೆಯ ಅತ್ತೆ ನೀಡಿದ್ರು ಸ್ಫೋಟಕ ಮಾಹಿತಿ

You may also like

Leave a Comment