4
Bengaluru tragedy: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕೆಎಸ್ ಸಿ ಎ ಅಧ್ಯಕ್ಷ ರಘುರಾಮ್ ಭಟ್ ವಿಚಾರಣೆಗೆ ಹಾಜರಾಗಿದ್ದರು. ಇದೇ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ನಕ್ಷೆಯನ್ನು ಸಿಐಡಿ ಅಧಿಕಾರಿಗಳು ತರಿಸಿಕೊಂಡಿದ್ದಾರೆ, ಸ್ಟೇಡಿಯಂನಲ್ಲಿ ಕೆಲಸ ಮಾಡುವ ಲಕ್ಷಿನಾರಾಯಣ್ ಅವರು ಸಿಐಡಿ ಕಚೇರಿಗೆ ನಕ್ಷೆಯನ್ನು ತಂದುಕೊಟ್ಟಿದ್ದಾರೆ.
ಹಾಗೇ ಗಾಯಗೊಂಡ ಅಭಿಮಾನಿಗಳಿಗೂ ನೊಟೀಸ್ ನೀಡಿರೋ ಸಿಐಡಿ ಅಧಿಕಾರಿಗಳು, ಗಾಯಗೊಂಡ ಒಬ್ಬ ಯುವಕ ಹೇಳಿಕೆ ನೀಡಲು ಸಿಐಡಿ ಕಚೇರಿಗೆ ಆಗಮಿಸಿದ್ದಾನೆ. ಹಾಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ, ಕೆಎಸ್ ಸಿಎ ಅಧ್ಯಕ್ಷರಿಗೆ ನೊಟೀಸ್ ನೀಡಿತ್ತು, ಈ ಹಿನ್ನೆಲೆಯಲ್ಲಿ ಇಂದು ಸಿಐಡಿ ತನಿಖಾಧಿಕಾರಿಗಳ ಮುಂದೆ ರಘುರಾಮ್ ಭಟ್ ಹಾಜರಾದರು.
