Home News ರಾಜ್ಯ ಮಟ್ಟದ ಮಹಿಳೆಯರ ನೆಟ್ ಬಾಲ್ ಪಂದ್ಯಾಟ: ಎಸ್.ಡಿ.ಎಂ ತಂಡ ಪ್ರಥಮ-ರಾಜ್ಯ ಸರ್ಕಾರ ಆಯೋಜನೆಯ ‘ಕರ್ನಾಟಕ...

ರಾಜ್ಯ ಮಟ್ಟದ ಮಹಿಳೆಯರ ನೆಟ್ ಬಾಲ್ ಪಂದ್ಯಾಟ: ಎಸ್.ಡಿ.ಎಂ ತಂಡ ಪ್ರಥಮ-ರಾಜ್ಯ ಸರ್ಕಾರ ಆಯೋಜನೆಯ ‘ಕರ್ನಾಟಕ ಕ್ರೀಡಾಕೂಟ 2026’ ರಲ್ಲಿ ಪ್ರಶಸ್ತಿ

0
3

ಉಜಿರೆ: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಸೇರಿದಂತೆ ತುಮಕೂರು ಜಿಲ್ಲಾಡಳಿತದ ಸಹಯೋಗದಲ್ಲಿ ತುಮಕೂರು ಜಿಲ್ಲೆಯ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಕ್ರೀಡಾಕೂಟ 2026’ ರಾಜ್ಯ ಮಟ್ಟದ ಮಹಿಳೆಯರ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ತಂಡವು ಪ್ರಥಮ ಸ್ಥಾನ ಪಡೆಯುವ ಮೂಲಕ ಪಂದ್ಯಾಟದ ಚಾಂಪಿಯನ್ ಗಳಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ, ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ತಂಡದಲ್ಲಿ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳಾದ ವರ್ಷಿತ, ರಶ್ಮಿ, ಸುರಕ್ಷಾ, ಪಲ್ಲವಿ, ಧನುಶ್ರೀ, ಪೂಜಾ, ಭೂಮಿಕ, ಸಹನಾ, ಸುಪ್ರಿಯ ಹಾಗೂ ದೀಪಿಕಾ ಭಾಗವಹಿಸಿದ್ದರು. ಪ್ರಶಸ್ತಿ ವಿಜೇತ ತಂಡಕ್ಕೆ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ತರಬೇತಿಯನ್ನು ನೀಡಿದ್ದಾರೆ.

ವಿಜೇತ ತಂಡಕ್ಕೆ ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಕಾಲೇಜಿನ ಪ್ರಾಚಾರ್ಯ ಪ್ರೊ. ವಿಶ್ವನಾಥ್ ಪಿ, ಪ್ರಮೋದ್ ಕುಮಾರ್ ಬಿ. ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ದೈಹಿಕ ಶಿಕ್ಷಣ ಉಪನ್ಯಾಸಕ ಮತ್ತು ತರಬೇತುದಾರ ಸುದೀನ್ ಪೂಜಾರಿ, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.