Home » Chakravarti Sulibele: ಚಕ್ರವರ್ತಿ ಸೂಲಿಬೆಲೆ ಮೇಲೆ ಸುಮೊಟೋ ಕೇಸು ದಾಖಲು!!!

Chakravarti Sulibele: ಚಕ್ರವರ್ತಿ ಸೂಲಿಬೆಲೆ ಮೇಲೆ ಸುಮೊಟೋ ಕೇಸು ದಾಖಲು!!!

by Mallika
1 comment
Chakravarti Sulibele

Chakravarti Sulibele: ಯುವ ಬ್ರಿಗೇಡ್‌ (yuva Brigade) ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಕಾರವಾರ ಗ್ರಾಮೀಣ ಠಾಣೆಯಲ್ಲಿ (Karwar Rural Station)ನ ನಲ್ಲಿ ಸುಮೊಟೋ ಕೇಸ್‌ (Sumoto Case) ದಾಖಲಾಗಿದೆ.

ಸಿಎಂ ಸಿದ್ದರಾಮಯ್ಯ ( CM Siddaramaiah) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರ ಕುರಿತು ಈ ಕೇಸು ದಾಖಲಾಗಿದೆ.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಹಿಂದೂಗಳು (Hindu) ಬದುಕಲು ಆಗಲ್ಲ, ಮುಸ್ಲಿಮರಿಗೆ (Muslim) ಸಿದ್ದರಾಮಯ್ಯ ಅಭಯ ಹಸ್ತವಿದೆ ಎಂದು ಚಕ್ರವರ್ತಿ ಸೂಲಿಬೆಲೆ ಭಾಷಣ ನೀಡಿದ್ದರು. ಹಾಗಾಗಿ ಧರ್ಮಗಳ ನಡುವೆ ವೈಮನಸ್ಸು ಉಂಟು ಮಾಡುವ ರೀತಿ ಭಾಷಣ ಮಾಡಿದ್ದರಿಂದ ಈ ದೂರು ದಾಖಲು ಮಾಡಲಾಗಿದೆ.

ಜಣಗಣಮನ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರವಾರಕ್ಕೆ ಬಂದಿದ್ದ ಸೂಲಿಬೆಲೆ ಅವರು ಮಾಧ್ಯಮಕ್ಕೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದರು. ಹಿಂದು – ಮುಸ್ಲಿಂ ನಡುವೆ ವೈಮನಸ್ಸು ಉಂಟು ಮಾಡುವ ಹೇಳಿಕೆ ನೀಡಿದ್ದಾರೆಂಬ ಆರೋಪ ಕೂಡಾ ಇವರ ಮೇಲೆ ಕೇಳಿ ಬಂದಿರುವುದರಿಂದ ಕಾರವಾರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಸುಮೊಟೋ ಕೇಸು ದಾಖಲಾಗಿದೆ.

 

ಇದನ್ನು ಓದಿ: Bjp Leaders: ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮತ್ತೆರಡು ಪ್ರಬಲ ಬಿಜೆಪಿ ನಾಯಕರು- ‘ಕಮಲ’ ಪಾಳಯದಲ್ಲಿ ಶುರುವಾಯ್ತು ಸಂಚಲನ !

You may also like

Leave a Comment