Home » Marathon: ಮಾ.9 ಕ್ಕೆ ರಾಜ್ಯ ಪೊಲೀಸರ ಮ್ಯಾರಥಾನ್‌

Marathon: ಮಾ.9 ಕ್ಕೆ ರಾಜ್ಯ ಪೊಲೀಸರ ಮ್ಯಾರಥಾನ್‌

0 comments

Marathon: ರಾಜ್ಯ ಪೊಲೀಸ್‌ ಇಲಾಖೆಯು ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಹಯೋಗದಲ್ಲಿ ʼನಮ್ಮ ಪೊಲೀಸ್‌ ನಮ್ಮ ಹೆಮ್ಮೆʼ ಎನ್ನುವ ಘೋಷಣೆಯಡಿ ಕರ್ನಾಟಕ ರಾಜ್ಯ ಪೊಲೀಸ್‌ ಓಟದ (ಕೆಎಸ್‌ಪಿ ರನ್)‌ 2 ನೇ ಆವೃತ್ತಿಯನ್ನು ಮಾ.9 ರಂದು ಭಾನುವಾರ ಆಯೋಜನೆ ಮಾಡಿದೆ.

ಬೆಂಗಳೂರಿನಲ್ಲಿ 10 ಸಾವಿರ ಸೇರಿ, ರಾಜ್ಯ ವ್ಯಾಪ್ತಿ 50 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಸ್‌ಬಿಐ ಬ್ಯಾಂಕ್‌ ಸಹಭಾಗಿತ್ವದ ಜೊತೆಗೆ ಮಣಿಪಾಲ್‌ ಆಸ್ಪತ್ರೆ, ಬಿಎಂಆರ್‌ಸಿಎಲ್‌ ಹಾಗೂ ರಾಜ್ಯ ಯುವಜನ ಸೇವೆಗಳ ಇಲಾಖೆ ಸಹಕಾರ ನೀಡಿದೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಹೇಳಿದರು. ಈ ಸಂದರ್ಭದಲ್ಲಿ ಮ್ಯಾರಥಾನ್‌ ಲೋಗೋ, ಪಾರಿತೋಷಕ ಹಾಗೂ ಟೀ ಶರ್ಟ್‌ನ್ನು ಡಿಜಿಪಿ ಬಿಡುಗಡೆಗೊಳಿಸಿದರು.

ಬಹುಮಾನ ವಿವರ: 10 ಕಿ.ಮೀ ಓಟದಲ್ಲಿ ಗೆಲ್ಲುವ ಪುರುಷ, ಮಹಿಳೆಯರು ಹಾಗೂ ಪೊಲೀಸರು ಮತ್ತು ಎಸ್‌ಬಿಐ ಸಿಬ್ಬಂದಿಗೆ ಪ್ರಥಮ- ₹1 ಲಕ್ಷ, ದ್ವಿತೀಯ- ₹50 ಸಾವಿರ ಹಾಗೂ ತೃತೀಯ- 30 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.

5 ಕಿ.ಮೀ ಓಟದಲ್ಲಿ ಗೆದ್ದವರಿಗೆ ಪ್ರಥಮ- ₹40 ಸಾವಿರ, ದ್ವಿತೀಯ- 25 ಸಾವಿರ, ತೃತೀಯ- ₹25 ಸಾವಿರ, ನಾಲ್ಕನೇ ಸ್ಥಾನಕ್ಕೆ ₹10 ಸಾವಿರ ಹಾಗೂ ಐದನೇ ಸ್ಥಾನಕ್ಕೆ ₹5 ಸಾವಿರ ನೀಡಲಾಗುತ್ತದೆ.

ಈ ಓಟದಲ್ಲಿ ಎಲ್ಲ ವಯೋಮಾನದವರು ಪಾಲ್ಗೊಳ್ಳಬಹುದು. ಕಾಲಮಿತಿಯ 10 ಕಿ.ಮೀ ಓಟವನ್ನು ವೃತ್ತಿಪರ ಓಟಗಾರರಿಗೆ ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ಎಲ್ಲರಿಗೂ ಪಾಲ್ಗೊಳ್ಳಲು 5 ಕಿ.ಮೀ. ಜಾಗೃತಿ ಓಟವಿದೆ. ಈ ಎರಡು ಓಟಗಳು ವಿಧಾನಸೌಧದಿಂದ ಆರಂಭಗೊಂಡು ಕಬ್ಬನ್‌ ಪಾರ್ಕ್‌ನಲ್ಲಿ ಸಂಚರಿಸಲಿದೆ.

You may also like