Home » Dakshina Kannada: ದಕ್ಷಿಣ ಕನ್ನಡ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯ ಹಿಂದಿನಿಂದ ಕೂದಲು ಸವರಿದ ಅನ್ಯಕೋಮಿನ ವ್ಯಕ್ತಿ: ದೂರು ದಾಖಲು

Dakshina Kannada: ದಕ್ಷಿಣ ಕನ್ನಡ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯ ಹಿಂದಿನಿಂದ ಕೂದಲು ಸವರಿದ ಅನ್ಯಕೋಮಿನ ವ್ಯಕ್ತಿ: ದೂರು ದಾಖಲು

0 comments
Dakshina Kannada

Dakshina Kannada: ಬಂಟ್ವಾಳ: ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೋರ್ವರ ಜಡೆಯನ್ನು ಹಿಂದಿನಿಂದ ಸವರಿ ವಿವಾದವುಂಟುಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಕ್ತಿಯೊಬ್ಬರು
ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರಿನಿಂದ ಸಂಚಾರ ಮಾಡುತ್ತಿದ್ದ ಸರಕಾರಿ ಬಸ್ ನಲ್ಲಿ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದರು. ಅವರು ಹಿಂಬದಿ ಸೀಟಿನಲ್ಲಿ ಕುಳಿತುಕೊಂಡ ವ್ಯಕ್ತಿಯೋರ್ವ ಮಹಿಳೆಯ ಜಡೆಯನ್ನು ಸವರಿದ್ದ. ಈ ವ್ಯಕ್ತಿ ಈ ರೀತಿ ವರ್ತಿಸುತ್ತಿರುವ ವೀಡಿಯೋವನ್ನು ಸಹಪ್ರಯಾಣಿಕರು ಚಿತ್ರೀಕರಣ ಮಾಡಿದ್ದಾರೆ.

ಮಂಗಳೂರು-ಧರ್ಮಸ್ಥಳ ಮಾರ್ಗವಾಗಿ ಚಲಿಸುವ ಕೆಎ-19-ಎಫ್-3361ನೇ ಕೆ.ಎಸ್.ಆರ್.ಟಿಸಿ ಬಸ್ಸು ಬಂಟ್ವಾಳ ಕಸಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿಗೆ ಸಂಜೆ ಸುಮಾರು 4.30 ಗಂಟೆಯ ಸಮಯಕ್ಕೆ ತಲುಪಿದಾಗ, ಮಹಿಳೆಯರು ಕುಳಿತಿರುವ ಸೀಟಿನ ಹಿಂಬದಿಯ ಸೀಟಿನಲ್ಲಿ ಹಮೀದ್ ಎಂಬ ವ್ಯಕ್ತಿ ಕೂದಲಿಗೆ ಕೈ ಹಾಕಿದ್ದಾನೆ.

ಹಮೀದ್, ಪಲ್ಲಿಗುಡ್ಡೆ ಮನೆ, ನಾವೂರ ಗ್ರಾಮ, ಬಂಟ್ವಾಳ ತಾಲೂಕು (Dakshina Kannada) ಎಂಬಾತ ಕುಳಿತುಕೊಂಡು, ಮುಂದಿನ ಸೀಟಿನಲ್ಲಿ ಕುಳಿತ ಮಹಿಳೆಯ ಜಡೆಯನ್ನು ಎಳೆಯುವುದು, ಬೆನ್ನಿನ ಹಿಂಬದಿಯಿಂದ ಸ್ಪರ್ಶಿಸಿ ಮಹಿಳೆಯ ಮಾನಕ್ಕೆ ಕುಂದುಂಟು ಮಾಡಿದ್ದು, ಸದ್ರಿ ಹಮೀದ್ ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದೂರು ದಾಖಲಾಗಿತ್ತು.

ಈ ಕುರಿತಂತೆ ಹಮೀದ್ ಪಲ್ಲಿಗುಡ್ಡೆ ಮನೆ, ನಾವೂರ ಗ್ರಾಮ, ಬಂಟ್ವಾಳ ತಾಲೂಕು ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

 

ಇದನ್ನು ಓದಿ: Mahesh Shetty Timarodi: ಧರ್ಮಸ್ಥಳದಲ್ಲಿ ಆಗಿತ್ತಾ ಶಾಸಕ ಹರೀಶ್ ಪೂಂಜಾಗೆ ಅವಮಾನ ? ” ಏಳಯ್ಯ ಮೇಲೆ, ಯಾರು ನಿನ್ನನ್ನು ಕೂರಕ್ಕೆ ಹೇಳಿದ್ದು?” ಎಂದು ಪೂಂಜಾರನ್ನು ಅವಮಾನಿಸಲಾಗಿತ್ತಾ ?

You may also like

Leave a Comment