ಭಾರತದಲ್ಲಿ ಬೀದಿ ನಾಯಿಗಾದರೂ ಗೌರವವಿದೆ, ಆದರೆ ಮುಸ್ಲಿಮರಿಗಿಲ್ಲವಂತೆ. ಹಾಗೆಂದು ಎಂದು ಹತಾಶೆಯಿಂದ ಹೇಳಿದ್ದಾರೆ ಆ ನಾಯಕ.
ಮೊನ್ನೆ ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಗಾರ್ಬಾ ನೃತ್ಯದಲ್ಲಿ ಭಾಗವಹಿಸುವವರ ಮೇಲೆ ಕಲ್ಲು ತೂರಾಟ ನಡೆದಿತ್ತು. ಆ ಆರೋಪದ ಮೇಲೆ ಕೆಲವು ಮುಸ್ಲಿಮ್ ಸಮುದಾಯದ ಸದಸ್ಯರ ಮೇಲೆ ಕೆಲವು ಪೊಲೀಸರು ಸಾರ್ವಜನಿಕವಾಗಿ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದಾದ ಕೆಲವೇ ದಿನಗಳಲ್ಲಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂದಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಬೀದಿ ನಾಯಿಗೆ ಇರುವ ಗೌರವ ಕೂಡಾ ಇಲ್ಲ ಎಂದು ಕಿಡಿ ಕಾರಿದ್ದಾರೆ.
ತೆಲಂಗಾಣದ ಹೈದರಾಬಾದ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ,’ ಬೀದಿ ನಾಯಿಗೆ ಭಾರತದಲ್ಲಿ ಗೌರವವಿದೆ, ಆದರೆ ಮುಸ್ಲಿಮರಿಗಿಲ್ಲ ‘ ಎಂದು ಹೇಳಿದ್ದಾರೆ.
ಅಲ್ಲಿನ ಮುಸ್ಲಿಮರಿಗೆ ಬೀದಿಯಲ್ಲಿ ಲಾಠಿಯಲ್ಲಿ ಹೊಡೆಯುತ್ತಿದ್ದಾರೆ. ಇದೇನಾ ಭಾರತೀಯ ಪ್ರಜಾಪ್ರಭುತ್ವ? ಇದೇನಾ ಭಾರತದ ಜಾತ್ಯಾತೀಯತೆ? ಬೀದಿ ಬದಿಯಲ್ಲಿರುವ ನಾಯಿಗೂ ಇಲ್ಲಿ ಮರ್ಯಾದೆ ನೀಡಲಾಗುತ್ತದೆ. ಆದರೆ ಮುಸ್ಲಿಮರಿಗೆ ಮರ್ಯಾದೆ ಸಿಗುತ್ತಿಲ್ಲ ಎಂದವರು ಹೇಳಿಕೆ ನೀಡಿದ್ದಾರೆ.
