Dog: ಉತ್ತರ ಪ್ರದೇಶದಲ್ಲಿ ನಾಯಿಗಳಿಗೆ ಒಂದು ಹೊಸ ಕಾನೂನು ಬಂದಿದೆ. ಅದ್ಯಾವುದೆಂದರೆ ಯಾವುದೇ ಪ್ರಚೋದನೆಯಿಲ್ಲದೆ ಮನುಷ್ಯನನ್ನು ನಾಯಿ ಒಂದು ಬಾರಿಗಿಂತ ಹೆಚ್ಚು ಬಾರಿ ಕಚ್ಚಿದರೆ ಅಂತಹ ನಾಯಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಉತ್ತರ ಪ್ರದೇಶ ಆದೇಶಿಸಿದೆ.
ಯಾವುದೇ ಪ್ರಚೋದನೆಯಿಲ್ಲದೆ ಒಂದು ಬಾರಿ ಮನುಷ್ಯನನ್ನು ಕಚ್ಚಿದ ನಾಯಿಗಳನ್ನು 10 ದಿನಗಳವರೆಗೆ ಪ್ರಾಣಿ ಕೇಂದ್ರದಲ್ಲಿ ಇಡಲಾಗುವುದು. ಅದೇ ಕೃತ್ಯ ಮುಂದುವರಿದರೆ ಆ ನಾಯಿಗಳು ಬದುಕಿರುವವರೆಗೂ ಅಲ್ಲಿಯೇ ಇರಿಸಲಾಗುವುದು ಎಂದು ಇದೇ ಜೀವಾವಧಿ ಶಿಕ್ಷೆ ಎಂದು ಹೇಳಲಾಗಿದೆ.
ಯಾರಾದರೂ ಅವುಗಳನ್ನು ದತ್ತು ತೆಗೆದುಕೊಳ್ಳುವುದಾದರೆ ಅವುಗಳನ್ನು ಮತ್ತೆ ಬೀದಿಗೆ ಬಿಡುವಂತಿಲ್ಲ. ಆಕ್ರಮಣಕಾರಿ ನಾಯಿಗಳ ನಿರ್ವಹಣೆಗೆ ಸೆ.10 ರಂದು ಎಲ್ಲಾ ಗ್ರಾಮೀಣ ಮತ್ತು ನಗರ ನಾಗರಿಕ ಸಂಸ್ಥೆಗಳಿಗೆ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಆದೇಶದಲ್ಲಿ ಹೊರಡಿಸಿದ್ದಾರೆ.
ಕೇಂದ್ರಕ್ಕೆ ಸೇರಿಸಿದ ಬಳಿಕ ಸಂತಾನ ಹರಣ ಚಿಕಿತ್ಸೆ ಮಾಡಿಲ್ಲದಿದ್ದರೆ ಮೊದಲು ಅದನ್ನು ಮಾಡಿ, ನಂತರ ರೇಬಿಸ್ ಲಸಿಕೆ ನೀಡಲಾಗುತ್ತದೆ. 10 ದಿನಗಳ ಕಾಲ ವೀಕ್ಷಣೆಯಲ್ಲಿ ಇಡಲಾಗುವುದು. ನಾಯಿಗೆ ಮೈಕ್ರೋಚಿಪ್ ನ್ನು ಅಳವಡಿಸಲಾಗುವುದು. ಹಾಗಾಗಿ ಹೊರಗಡೆ ಬಿಟ್ಟ ನಂತರ ಅದು ಎಲ್ಲಿದೆ ಎನ್ನುವುದನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ.
ಪ್ರಾಣಿಗಳ ಅನುಭವ ಹೊಂದಿರುವವರು, ಆ ಪ್ರದೇಶದ ಪಶು ವೈದ್ಯರು, ನಾಯಿಗಳ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುವವರು ನಾಯಿಗೆ ಕಚ್ಚಲು ಪ್ರಚೋದನೆ ಆಗಿದೆಯೇ ಹಾಗಾಗಿ ಅದು ಕಚ್ಚಿದೆಯೇ ಎನ್ನುವುದನ್ನು ಇವರು ಪರಿಶೀಲನೆ ಮಾಡುತ್ತಾರೆ. ಕಲ್ಲು ಎಸೆದ ನಂತರ ಪ್ರಾಣಿ ಕಚ್ಚಿದರೆ, ಅದನ್ನು ಅಪ್ರಚೋದಿತ ದಾಳಿ ಎಂದು ಪರಿಗಣಿಸಲಾಗುವುದಿಲ್ಲ.
