Home » Sullia: ಸುಳ್ಯ ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

Sullia: ಸುಳ್ಯ ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

0 comments

Sullia: ಫೆ.26 ರಂದು ಸುಳ್ಯದಲ್ಲಿ ಬಿ.ಡಿ.ಎಸ್ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.

ಕೃತಿಕಾ ನಿಡೋಣಿ (21 ವ) ಮೃತಪಟ್ಟ ಯುವತಿ. ಖಾಸಗಿ ಡೆಂಟಲ್‌ ಕಾಲೇಜಿನ ಬಿ.ಡಿ.ಎಸ್‌ ವಿದ್ಯಾರ್ಥಿನಿಯಾಗಿರುವ ಈಕೆ ಬೆಳಗಾವಿ ಮೂಲದವಳು.

ವಸತಿ ನಿಲಯದ ಕೊಠಡಿಯಲ್ಲಿ ಬುಧವಾರ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ನೇಣು ಬಿಗಿಯುವ ಮೊದಲು ಯಾರಿಗೋ ಫೋನ್‌ ಮಾಡಿ ತಾನು ಸಾಯುವ ಕುರಿತು ಹೇಳುತ್ತಿದ್ದಳು ಎನ್ನಲಾಗಿದೆ. ಕುತ್ತಿಗೆಗೆ ವೇಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗೆ ದೂರಿನಲ್ಲಿ ತಿಳಿಸಲಾಗಿದೆ.

ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like