3
Student Death: ಬಸ್’ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿದ್ಯಾರ್ಥಿನಿಯೋರ್ವಳು ಕೆಳಗೆ ಬಿದ್ದು ಸಾವನ್ನಪ್ಪಿರುವ (Student Death) ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಮಧು ಕುಂಬಾರ (14) ಎಂದು ಗುರುತಿಸಲಾಗಿದೆ.

Source: news 18
ಪ್ರೌಢಶಾಲಾ ವಿದ್ಯಾರ್ಥಿನಿ ಮಧು ಕುಂಬಾರ ಶಾಲೆಗೆ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಳು. ಬಸ್’ನಲ್ಲಿ ಜನರು ತುಂಬಿ ತುಳುಕುತ್ತಿದ್ದು, ರಷ್ ನಲ್ಲಿ ಕೊಂಚವೂ ಸ್ಥಳವಿಲ್ಲದ ಕಾರಣ ಯುವತಿ ಬಸ್’ನ ಬಾಗಿಲ ಬಳಿ ನಿಂತಿದ್ದಳು. ಬಸ್ ಸಾಗುತ್ತಿದ್ದಂತೆ ಯುವತಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ನೆಲಕ್ಕೆ ಬಿದ್ದ ಪರಿಣಾಮ ತಲೆಗೆ ಬಲವಾಗಿ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ.
