Home » Food: ಗಂಟಲಲ್ಲಿ ಪೂರಿ ಸಿಲುಕಿ ವಿದ್ಯಾರ್ಥಿ ಸಾವು – ಆಗಿದ್ದೇನೆಂದು ಗೊತ್ತಾದ್ರೆ ನೀವು ಶಾಕ್ ಆಗ್ತೀರಾ!!

Food: ಗಂಟಲಲ್ಲಿ ಪೂರಿ ಸಿಲುಕಿ ವಿದ್ಯಾರ್ಥಿ ಸಾವು – ಆಗಿದ್ದೇನೆಂದು ಗೊತ್ತಾದ್ರೆ ನೀವು ಶಾಕ್ ಆಗ್ತೀರಾ!!

11 comments

Food: ವಿದ್ಯಾರ್ಥಿ ಒಬ್ಬ ಶಾಲೆಯಲ್ಲಿ ಊಟದ ವಿರಾಮದ ವೇಳೆ ಪೂರಿ ತಿನ್ನುವಾಗ ಗಂಟಲಲ್ಲಿ ಸಿಲುಕಿ, ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಬೇಗಂಪೇಟ್‌ನಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ವೀರೇನ್‌ ಊಟದ (Food) ವಿರಾಮದಲ್ಲಿ, ತನ್ನ ಮನೆಯಿಂದ ತಂದಿದ್ದ 3 ಪೂರಿಗಳನ್ನು ಒಂದೇ ಬಾರಿಗೆ ತಿನ್ನಲು ಪ್ರಯತ್ನ ಮಾಡಿದ್ದಾನೆ. ಆದರೆ ಈ ಸಂದರ್ಭದಲ್ಲಿ ಆತನ ಗಂಟಲಲ್ಲಿ ಪೂರಿ ಸಿಕ್ಕಿಕೊಂಡಿದ್ದು, ಆತನಿಗೆ ಪೂರಿಯನ್ನು ಉಗಿಯಲು ಆಗದೇ ನುಂಗಲು ಆಗದೇ ಉಸಿರಾಟ ಸಮಸ್ಯೆಯಿಂದ ಅಲ್ಲೇ ಕುಸಿದು ಬಿದ್ದಿದ್ದಾನೆ. ವಿಷಯ ತಿಳಿದ ತಕ್ಷಣವೇ ಶಾಲಾ ಸಿಬ್ಬಂದಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಬಾಲಕ ಸ್ಥಳೀಯ ಶಾಲೆಯೊಂದರಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ವೀರೇನ್‌ ಜೈನ್‌ (11) ಎಂದು ಗುರುತಿಸಲಾಗಿದೆ.

You may also like

Leave a Comment