Home » Maharashtra: ಎಲ್ಲಾ ವಿಷಯಗಳಲ್ಲೂ 35 % ಪಡೆದು ಪಾಸಾಗಿ ಸುದ್ದಿಯಾದ ಎಸೆಸೆಲ್ಸಿ ವಿದ್ಯಾರ್ಥಿ; ಹೇಳತೀರದ ಹೆತ್ತವರ ಸಂಭ್ರಮ !

Maharashtra: ಎಲ್ಲಾ ವಿಷಯಗಳಲ್ಲೂ 35 % ಪಡೆದು ಪಾಸಾಗಿ ಸುದ್ದಿಯಾದ ಎಸೆಸೆಲ್ಸಿ ವಿದ್ಯಾರ್ಥಿ; ಹೇಳತೀರದ ಹೆತ್ತವರ ಸಂಭ್ರಮ !

by ಹೊಸಕನ್ನಡ
0 comments
Maharashtra

Maharashtra: ಈ ಅದೃಷ್ಟವಂತ ಮತ್ತು ಅತ್ಯಂತ ಬುದ್ಧಿವಂತ ಹುಡುಗ ಸಂಭ್ರಮಿಸಲು ನೂರು ಕಾರಣಗಳಿವೆ. ಹೌದು, ತಾನು ಬರೆದ ಎಲ್ಲಾ ವಿಷಯಗಳಲ್ಲಿ ತಲಾ 35 ಅಂಕ ಪಡೆದು ವಿದ್ಯಾರ್ಥಿಯೊಬ್ಬ ಪಾಸಾಗುವ ಮೂಲಕ ಹೆತ್ತವರ ಸಂಭ್ರಮಕ್ಕೆ ಕಾರಣವಾಗಿ ಸುದ್ದಿಯಾಗಿದ್ದಾನೆ. ಆತನ ಮನೆಯವರು ಮಗನಿಗೆ ಮತ್ತು ಸುತ್ತಮುತ್ತಲ ಊರವರಿಗೆ ಸಿಹಿತಿನಿಸಿ ಸಂಭ್ರಮಿಸಿದ್ದಾರೆ.

ಮಹಾರಾಷ್ಟ್ರದ (Maharashtra) ಥಾಣೆಯ ಮರಾಠಿ ಮಾಧ್ಯಮಸಲ್ಲಿ ಓದಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ವಿಶಾಲ್ ಕಾರಾಡ್ ಈಗ ಅತೀ ಹೆಚ್ಚು ಅಂಕ ಪಡೆದು ರ್ಯಾಂಕ್ ತಂದು ಕೊಟ್ಟ ಹುಡುಗರಿಗಿಂತ ಹೆಚ್ಚು ಸುದ್ದಿಯಲ್ಲಿದ್ದಾನೆ. ಈಗ ಎಲ್ಲಾ ಸಾಮಾಜಿಕ ತಾಣಗಳಲ್ಲೂ ಆತನದೇ ಸ್ಪೆಷಲ್ ಸಾಧನೆಯ ಹವಾ.

10 ನೇ ತರಗತಿಯಲ್ಲಿ ಕೊನೆಗೂ, ಹಲವು ಪ್ರಯತ್ನಗಳ ಬಳಿಕ ಉತ್ತೀರ್ಣನಾದ ಬಗ್ಗೆ ಉತಲ್‌ಸರ್‌ನಲ್ಲಿರುವ ಅಂಬೇಡ್ಕರ್ ನಗರ ಕೊಳೆಗೇರಿ ನಿವಾಸಿ ಆಟೋ ಚಾಲಕರಾಗಿರುವ ತಂದೆ ಅಶೋಕ್ ಮತ್ತು ತಾಯಿ ತುಂಬಾ ಸಂಭ್ರಮ ವ್ಯಕ್ತಪಡಿಸಿದ್ದಾರೆ.

”ನನಗೆ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಗ್ಯಾರಂಟಿ ಇರಲಿಲ್ಲ. ಆ ಬಗ್ಗೆ ಎಂದಿನಂತೆ ಚಿಂತೆ ಇತ್ತು. ಕೊನೆಗೂ ನಾನು ಉತ್ತೀರ್ಣನಾಗಿದ್ದು, ನಾನು ಮುಂದೆ ಶಿಕ್ಷಣ ಮುಂದುವರಿಸುತ್ತೇನೆ” ಎಂದು ವಿಶಾಲ್ ಹೇಳಿದ್ದಾನೆ.

You may also like

Leave a Comment