Home » West Bengal: ಶಿಕ್ಷಣ ಸಚಿವರ ಕಾರಿನ ಮೇಲೆ ವಿದ್ಯಾರ್ಥಿಗಳಿಂದ ದಾಳಿ,ಕಲ್ಲು ತೂರಾಟ – ಸಚಿವರು ಆಸ್ಪತ್ರೆಗೆ ದಾಖಲು

West Bengal: ಶಿಕ್ಷಣ ಸಚಿವರ ಕಾರಿನ ಮೇಲೆ ವಿದ್ಯಾರ್ಥಿಗಳಿಂದ ದಾಳಿ,ಕಲ್ಲು ತೂರಾಟ – ಸಚಿವರು ಆಸ್ಪತ್ರೆಗೆ ದಾಖಲು

0 comments

West Bengal: ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಸಚಿವರ ಕಾರಿನ ಮೇಲೆ ಕಲ್ಲುತೂರಾಟ ನಡೆಸಿ ದಾಳಿ ನಡೆಸಿದ್ದಾರೆ. ಗಾಯಗೊಂಡ ಸಚಿವರನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ(Jadavpur University ) ಆಡಳಿತ ಮತ್ತು ಎಡಪಂಥೀಯ ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆ ನಡೆದಿತ್ತು. ಈ ವೇಳೆ ಪಶ್ಚಿಮ ಬಂಗಾಳ ಕಾಲೇಜು ಮತ್ತು ವಿಶ್ವವಿದ್ಯಾಲಯ ಪ್ರಾಧ್ಯಾಪಕರ ಸಂಘದ (ಡಬ್ಲ್ಯೂಬಿಸಿಯುಪಿಎ) ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಲು ಜೆಯು ಆವರಣಕ್ಕೆ ಬಂದಿದ್ದ ಸಚಿವ ಬಸು, ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತನಾಡಲು ಮುಂದಾದರು. ಆದರೆ ಪರಿಸ್ಥಿತಿ ಕೈಮೀರಿ ವಿದ್ಯಾರ್ಥಿಗಳು ಸಚಿವರ ಕಾರಿಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ವೇಳೆ ಕೆಲವು ವಿದ್ಯಾರ್ಥಿಗಳು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು.

ಘಟನೆಯಲ್ಲಿ ಸಚಿವ ಬಸು ಅವರ ಕಾರಿನ ವಿಂಡ್‌ಸ್ಕ್ರೀನ್ ಜಖಂಗೊಂಡಿದ್ದು, ರಿಯರ್‌ವ್ಯೂ ಕನ್ನಡಿಗಳು ಪುಡಿಪುಡಿಯಾಗಿವೆ. ಗಾಜಿನ ಚೂರುಗಳು ಬಸು ಅವರ ಎಡಗೈಗೆ ತಗುಲಿ ಗಾಯಗಳಾಗಿವೆ. ತಕ್ಷಣ ಅವರನ್ನು ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಪಶ್ಚಿಮ ಬಂಗಾಳದ (West Bengal) ಶಿಕ್ಷಣ ಸಚಿವ (Education Minister) ಬೃತ್ಯ ಬಸು (Bratya Basu) ಗಾಯಗೊಂಡ ಘಟನೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.

You may also like