

ಧರ್ಮಸ್ಥಳ: ಜ. 18-19ರಂದು ಪಿಲಿಕುಳದಲ್ಲಿ ನಡೆದ ಕ್ಯಾಂಪೂರಿಯಲ್ಲಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮದ ಕಬ್ ವಿದ್ಯಾರ್ಥಿಗಳು ಸಂಪೂರ್ಣ ಸಮವಸ್ತ್ರ ಧರಿಸಿಕೊಂಡು ತಮಗೆ ಕೊಟ್ಟ ಎಲ್ಲಾ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಕ್ಯಾಂಪೂರಿಯಲ್ಲಿ ಕಬ್ ಮಕ್ಕಳಿಗೆ ನಡೆಸಿದ ಎಲ್ಲಾ ಸ್ಪರ್ಧೆಯಲ್ಲಿ ಗರಿಷ್ಠ ‘ಎ’ ಗ್ರೇಡ್ ಪಡೆದು ಉತ್ತಮ ಪ್ರದರ್ಶನ ನೀಡಿ ಶಾಲೆಗೆ ಗೌರವ ತಂದುಕೊಟ್ಟಿದ್ದಾರೆ.
ಶಾಲಾ ಮುಖ್ಯಶಿಕ್ಷಕಿ ಪರಿಮಳ ಎಂ. ವಿ. ಅವರ ಮಾರ್ಗದರ್ಶನದೊಂದಿಗೆ ಎಲ್ಲಾ ಸ್ಪರ್ಧೆ ಯಶಸ್ವಿಯಾಗಿ ನೆರವೇರಿತು. ಕಬ್ ಮಾಸ್ಟರ್ ಕಾದಂಬರಿ ಸಂದೀಪ್ ಹಾಗೂ ಅಮೃತ ವಿ. ಶೆಟ್ಟಿಯವರು ಮಕ್ಕಳಿಗೆ ಎರಡು ದಿನಗಳ ತರಬೇತಿ ನೀಡಿ ಸಮಗ್ರ ಪ್ರಶಸ್ತಿ ಗಳಿಸುವಲ್ಲಿ ಪ್ರೋತ್ಸಾಹ ಹಾಗೂ ತರಬೇತಿ ನೀಡಿದ್ದರು.













