SSLC: ಶೇ.75 ಕ್ಕಿಂತ ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಬರೆಯಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಹೇಳಿದೆ. ಆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಅನ್ನು ಬರೆಯಬಹುದು. ಖಾಸಗಿ ಅಭ್ಯರ್ಥಿಗಳಾರಿ ಪರೀಕರಷೆ ಬರೆಯುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಮಂಡಳಿ ಸ್ಪಷ್ಟ ಪಡಿಸಿದೆ.
ವಿದ್ಯಾರ್ಥಿಗಳ ಆಂತರಿಕ ಅಂಕವನ್ನು ಮಂಡಳಿಯ ಅಂತಿಮ ಆಂತರಿಕ ಅಂಕಗಳ ತಂತ್ರಾಂಶಗದಲ್ಲಿ ಫೆ.23 ರೊಳಗೆ ನಮೂದಿಸಿ ಫ್ರೀಜ್ ಮಾಡಲು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಆಂತರಿಕ ಅಂಕಗಳನ್ನು ನಮೂದಿಸಿದ ನಂತರ ವಿದ್ಯಾರ್ಥಿಯ ವರದಿಯ ಪ್ರತಿ ಪಡೆದು, ವಿದ್ಯಾರ್ಥಿಯ ಮಾಹಿತಿ, ಅಂಕಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಬೇಕು. ಹಾಗೆನೇ ಫ್ರೀಜ್ ಮಾಡುವ ಮೊದಲು ವಿದ್ಯಾರ್ಥಿಗಳ ಆಂತರಿಕ ಅಂಕಗಳ ವರದಿ ಕುರಿತು ಪೋಷಕರಿಗೂ ಮಾಹಿತಿ ನೀಡಿ ಅವರ ಸಹಿಯನ್ನು ಪಡೆಯಬೇಕು ಎಂದು ಮಂಡಳಿ ತಿಳಿಸಿದೆ.
