Home » Hubballi: ಪುಷ್ಪ ಸ್ಟೈಲ್‌ನಲ್ಲಿ ಬೈಕ್‌ ಮೇಲೆ ಸ್ಟಂಟ್‌ ಮಾಡಿದ ಪುಂಡ- ಗರಂ ಆದ ಖಾಕಿ ಪಡೆ!

Hubballi: ಪುಷ್ಪ ಸ್ಟೈಲ್‌ನಲ್ಲಿ ಬೈಕ್‌ ಮೇಲೆ ಸ್ಟಂಟ್‌ ಮಾಡಿದ ಪುಂಡ- ಗರಂ ಆದ ಖಾಕಿ ಪಡೆ!

0 comments

Hubballi: ನಡುರಸ್ತೆಯ ಮೇಲೆ ಸ್ಟಂಟ್‌ ಮಾಡುತ್ತಾ ಬೈಕ್‌ನಲ್ಲಿ ಪುಷ್ಪ ಶೈಲಿನಲ್ಲಿ ಫೋಸ್‌ ಕೊಡುತ್ತಾ ಡ್ರೈವ್‌ ಮಾಡಿದ ಪುಂಡನಿಗೆ ಪೊಲೀಸರು ಸಖತ್‌ ಬುದ್ಧಿ ಕಲಿಸಿದ್ದಾರೆ. ಈ ಘಟನೆ ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ನಡೆದಿದೆ.

ಬೈಕ್‌ ಮೇಲೆ ಪುಂಡನೋರ್ವ ಸ್ಟಂಟ್‌ ಮಾಡುತ್ತಾ ವೀಡಿಯೋ ರೆಕಾರ್ಡ್‌ ಮಾಡುತ್ತಾ, ಸೋಷಿಯಲ್‌ ಮೀಡಿಯಾಗೆ ಅಪ್‌ಲೋಡ್‌ ಮಾಡಿದ್ದ. ಈ ಸುದ್ದಿ ಪೊಲೀಸರಿಗೆ ತಲುಪಿದೆ. ಕೂಡಲೇ ಪೊಲೀಸರು ಪುಂಡನಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಹಾಗೂ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಯುವಕನ ವಿರುದ್ಧ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿ ವಾಹನ ಸೀಜ್‌ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like