Home » Subramanya: 10 ದಿನಗಳ ಹಿಂದೆ‌ ಮದುವೆಯಾಗಿದ್ದ ಯುವಕ ಸಿಡಿಲು ಬಡಿದು ಸಾವು

Subramanya: 10 ದಿನಗಳ ಹಿಂದೆ‌ ಮದುವೆಯಾಗಿದ್ದ ಯುವಕ ಸಿಡಿಲು ಬಡಿದು ಸಾವು

1 comment
Subramanya

Subramanya: ಸಿಡಿಲು ಬಡಿದು ನವ ವಿವಾಹಿತ ವ್ಯಕ್ತಿಯೋರ್ವರು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಸುಬ್ರಹ್ಮಣ್ಯ ಗ್ರಾಮದ ಸೋಮಸುಂದರ್ (34) ಮೃತಪಟ್ಟವರು. ಕಡಬ ತಾಲೂಕಿನ ಸುಬ್ರಹ್ಮಣ್ಯದ ಪರ್ವತಮುಖಿ ನಿವಾಸಿಯಾಗಿರುವ ಸೋಮಸುಂದರ್ ಸುಬ್ರಹ್ಮಣ್ಯ ಸಮೀಪ ಕಾರ್ ವಾಷಿಂಗ್ ಉದ್ಯಮ ನಡೆಸಿಕೊಂಡಿದ್ದರು. ಇವರು ಕೇವಲ 10 ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೃತರು ತಾಯಿ, ತಂಗಿ, ಪತ್ನಿಯನ್ನು ಅಗಲಿದ್ದಾರೆ.

ಇದನ್ನೂ ಓದಿ: Women Watching Obscene Videos: ಅಶ್ಲೀಲ ವಿಡಿಯೋ ವೀಕ್ಷಣೆಯಲ್ಲಿ 30% ಹುಡುಗಿಯರಿದ್ದಾರೆ : ಸಂಶೋಧನಾ ವರದಿಯಲ್ಲಿ ಬಹಿರಂಗ

ಇಂದು ಸಂಜೆ ಸುರಿದ ಮಳೆ ಆರಂಭದ ಮೊದಲು ಗುಡುಗು ಗಾಳಿ ಬೀಸುತ್ತಿತ್ತು. ಆಗ ಮನೆಯಂಗಲದಲ್ಲಿದ್ದ ಒಣಗಿಸುತ್ತಿದ್ದ ಅಡಿಕೆಯನ್ನು ಸೋಮಸುಂದರ್ ರವರು ರಾಶಿ ಹಾಕಲು ತೆರಳಿದ್ದರು. ಆ ವೇಳೆ ಜೋರಾಗಿ ಸಿಡಿಲು ಬಡಿದಿದೆ. ಅವರು ಅಲ್ಲೇ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಕಡಬದ ಸಮುದಾಯ ಆಸ್ಪತ್ರೆಗೆ ಕರೆದೊಯ್ದಲಾಗಿದೆ. ಆದರೆ ದುರದೃಷ್ಟವಶಾತ್ ಆ ವೇಳೆಗಾಗಲೇ ಅವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಕೇವಲ 10 ದಿನಗಳ ಹಿಂದೆ ಮದುವೆಯಾಗಿದ್ದ ಅವರ ದುರ್ಮರಣ ಇಡೀ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಇದನ್ನೂ ಓದಿ: Government Employees: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! ನಿಮಗಾಗಿ ಕಾದಿವೆ ಹಲವಾರು ಲಾಭಗಳು

You may also like

Leave a Comment