7
Hassana: ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾನೆ. ಈ ಮೂಲಕ ಸಾವಿನ ಸಂಖ್ಯೆ 15ಕ್ಕೆ ಏರಿದೆ.
ವೈದ್ಯರೊಬ್ಬರ ಕಾರು ಚಾಲಕನಾಗಿ ಕರ್ತವ್ಯ ಮಾಡುತ್ತಿದ್ದ ಹಾಸನ ನಗರದ ಪೆನ್ಶನ್ ಮೊಹಲ್ಲಾ ನಿವಾಸಿ ಮಂಜುನಾಥ್ (51) ಮೃತಪಟ್ಟವರು.
ಮಂಜುನಾಥ್ ಅವರಿಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ಒಮ್ಮೆಲೇ ಎದೆನೋವು ಕಾಣಿಸಿದೆ. ವೈದ್ಯರಿಗೆ ಕರೆ ಮಾಡಿ ಬರುವಷ್ಟರಲ್ಲಿ ಮಂಜುನಾಥ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
