Home » BBK11: ಬಿಗ್‌ಬಾಸ್‌ ಕಾರ್ಯಕ್ರಮ ನಿರೂಪಕ ಸ್ಥಾನಕ್ಕೆ ಸುದೀಪ್‌ ಬದಲು ಇವರ ಗ್ರ್ಯಾಂಡ್‌ ಎಂಟ್ರಿ

BBK11: ಬಿಗ್‌ಬಾಸ್‌ ಕಾರ್ಯಕ್ರಮ ನಿರೂಪಕ ಸ್ಥಾನಕ್ಕೆ ಸುದೀಪ್‌ ಬದಲು ಇವರ ಗ್ರ್ಯಾಂಡ್‌ ಎಂಟ್ರಿ

0 comments

BBK11: ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನಲ್ಲಿ ನಟ ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆಗೆ ಇರುವಾಗ ಬಿಗ್ ಬಾಸ್ (BBK11)ಸ್ಪರ್ಧಿಗಳನ್ನು ತಮ್ಮದೇ ಶೈಲಿಯಲ್ಲಿ ನಗಿಸುತ್ತಾರೆ. ಮತ್ತು ತಪ್ಪು ಮಾಡಿದವರಿಗೆ ಎಚ್ಚರಿಕೆ ನೀಡುತ್ತಾರೆ.

ಆದ್ರೆ ಬರೀ ಜಗಳವೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಇದೀಗ ಬಿಗ್​ಬಾಸ್ ಮನೆಗೆ ನಿರ್ದೇಶಕ ಯೋಗರಾಜ್ ಭಟ್ ಎಂಟ್ರಿ ನೀಡಿದ್ದು, ತಮ್ಮ ಮಾತುಗಳಿಂದ ಸ್ಪರ್ಧಿ ಗಳನ್ನು ನಗೆ ಕಡಲಲ್ಲಿ ತೇಲಿಸಿದ್ದಾರೆ.

ಹೌದು, ಬಿಗ್​ಬಾಸ್ ಕನ್ನಡ ಸೀಸನ್ 11 ಆರಂಭದ ಒಂದೆರಡು ವಾರ ಬರೀ ಜಗಳಗಳೇ ನಡೆದಿದ್ದವು. ಜಗಳ-ಬೈದಾಟ, ಹೊಡೆದಾಟಗಳನ್ನು ನೋಡಿ ನೋಡಿ ಸಾಕಾಗಿತ್ತು. ಎಲ್ಲರ ಮನಸ್ಥಿತಿ ಹದಗೆಟ್ಟಿತ್ತು. ಅದರಲ್ಲೂ ಜಗದೀಶ್ ಹಾಗೂ ರಂಜಿತ್ ಅನ್ನು ಹೊರಗೆ ಹಾಕಿದ ಬಿಗ್​ಬಾಸ್ ಈಗ ಹನುಮಂತನನ್ನು ವೈಲ್ಡ್ ಕಾರ್ಡ್ ಮೂಲಕ ಒಳಗೆ ಕಳಿಸಿದ್ದಾರೆ.

ಸದ್ಯ ಹನುಮಂತ ಒಳಗೆ ಹೋದ ಬಳಿಕ ಮನೆಯ ವಾತಾವರಣ ಸುಧಾರಿಸಿದೆ. ಇದರ ನಡುವೆಯೇ ಇದೀಗ ಬಿಗ್​ಬಾಸ್ ಮನೆಗೆ ವಿಕಟ ಕವಿ ಎಂದೇ ಹೆಸರಾಗಿರುವ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹೋಗಿದ್ದಾರೆ.

ಹೌದು, ಕಿಚ್ಚ ಸುದೀಪ್ ಬದಲು ಯೋಗರಾಜ್ ಭಟ್ರು ಪಂಚಾಯಿತಿ ಮಾಡಲು ಬಂದಿದ್ದು, ಉತ್ತರ ಕರ್ನಾಟಕ ಶೈಲಿಯ ಡ್ರೆಸ್ ತೊಟ್ಟು ಮನೆಗೆ ಬಂದಿದ್ದಾರೆ. ಹಾಗೆ ಎಲ್ಲರ ಜೊತೆಗೆ ಬೆರೆತು ಏನು ಹೇಳಬೇಕೋ? ಅದನ್ನ ತಮ್ಮದೇ ಶೈಲಿಯಲ್ಲಿಯೇ ಮನೆಯ ಮಂದಿಗೆ ಮುಟ್ಟಿಸಿದ್ದಾರೆ.

ಹೀಗೆ ಹತ್ತಾರು ಸರ್ಪ್ರೈಸ್‌ಗಳು ಮನೆಯಲ್ಲಿ ನಡೆಯುತ್ತಿದೆ. ಇದರ ಮಧ್ಯೆ ಸುದೀಪ್ ಮುಂದಿನ ಸೀಸನ್ ಅನ್ನ ಮಾಡೋದಿಲ್ಲ ಅಂತಲೂ ಘೋಷಣೆ ಮಾಡಿ ಆಗಿದೆ. ಒಟ್ಟಾರೆ, ಬಿಗ್ ಬಾಸ್ ಈ ಸಲ ಸರ್ಪ್ರೈಸ್‌ಗಳನ್ನೆ ಕೊಡ್ತಾ ಇದೆ ಅಂದರೆ ತಪ್ಪಾಗಲಾರದು.

You may also like

Leave a Comment