Home » Suhana Syed: ಹಿಂದೂ ಯುವಕನ ವರಿಸಲು ಮುಂದಾದ ಸರಿಗಮಪ ಖ್ಯಾತಿಯ ಸುಹಾನ ಸೈಯದ್ !!

Suhana Syed: ಹಿಂದೂ ಯುವಕನ ವರಿಸಲು ಮುಂದಾದ ಸರಿಗಮಪ ಖ್ಯಾತಿಯ ಸುಹಾನ ಸೈಯದ್ !!

0 comments

Suhana Syed: ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯದ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಗಿದ್ದು, ಬಹುಕಾಲದ ಗೆಳೆಯ, ಹಿಂದೂ ಯುವಕ ನಿತಿನ್ ಎಂಬುವವರನ್ನ ವರಿಸಲಿದ್ದಾರೆ.

ಹೌದು, ಕನ್ನಡ ಸರಿಗಮಪ ರಿಯಾಲಿಟಿ ಶೋನಲ್ಲಿ ಶ್ರೀಕರನೇ ಶ್ರೀನಿವಾಸನೇ ಎಂದು ಹಾಡಿ ಕಲಾಭಿಮಾನಿಗಳ ಮನಸ್ಸು ಕದ್ದಿದ್ದ ಮುಸ್ಲಿಂ ಯುವತಿ ಸುಹಾನಾ ಸೈಯದ್ ನಂತರ ಮುಸ್ಲಿಂ ಮೌಲ್ವಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸುಹಾನಾ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ಇದೀಗ ಇವರು ಹಿಂದೂ ಯುವಕನೊಂದಿಗೆ ಮದುವೆಯಾಗಲಿದ್ದಾರೆ.

ಅಂದಹಾಗೆ ಇದೀಗ ಸುಹಾನಾ ಇದೀಗ ಬಹುಕಾಲದ ಗೆಳೆಯನನ್ನು ವರಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಸುಹಾನಾ ಕೈಹಿಡಿಯಲಿರುವವನು ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್. ಪ್ರಸಿದ್ಧ ರಂಗ ತರಬೇತಿ ಕೇಂದ್ರ ನೀನಾಸಂನಲ್ಲಿ ತರಬೇತಿ ಪಡೆದಿರುವ ನಿತಿನ್ ಹಾಗೂ ಸುಹಾನಾ ಕಳೆದ 16 ವರ್ಷಗಳಿಂದ ಪರಸ್ಪರ ಒಡನಾಟ ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಪ್ರೇರಕವಾಗಿದೆ. ತಮ್ಮ ಮದುವೆಯ ವಿಚಾರವನ್ನು ಸುಹಾನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Raichur : ರಾಯಚೂರಿನ ಮಾನ್ವಿಗೆ ತಿಮರೋಡಿ ಗಡಿಪಾರು – ‘ನಮ್ಮ ಊರಿಗೆ ಬೇಡ, ಕಾಡಿಗೆ ಕಳುಹಿಸಿ’ ಎಂದು ದಲಿತ ಸಂಘಟನೆ ಪ್ರತಿಭಟನೆ !!

ಪರಸ್ಪರ ಪ್ರೀತಿ ಇದೆ ಸಾಕು. ನಮ್ಮ ನಂಬಿಕೆಗಳು ಮುಂದುವರಿಯಲಿದೆ, ಬದಲಾಗುವ ಅವಶ್ಯಕತೆ ಇಲ್ಲ. ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ. ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು. ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಆಶೀರ್ವಾದವಿರಲಿ ಎಂದು ಸುಹಾನಾ ಬರೆದುಕೊಂಡಿದ್ದಾರೆ.

You may also like