Home » CM Siddaramaiah: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ – ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

CM Siddaramaiah: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ – ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

0 comments

CM Siddaramaiah : ಕರಾವಳಿಯ ಅತ್ಯಂತ ಸಂಚಲನ ಸೃಷ್ಟಿಸುತ್ತಿರುವ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಕುರಿತಾಗಿ ಕೊನೆಗೂ ಸಿಎಂ ಸಿದ್ದರಾಮಯ್ಯ ಅವರು ಮೌನ ಮುರಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಪಟ್ಟಂತೆ ನಿನ್ನೆಯೇ ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರಿಗೆ ಮಂಗಳೂರಿಗೆ ಹೋಗಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಕೊಲೆ ಯಾರದ್ದೇ ಆಗಿರಲಿ, ಯಾವ ಕಾರಣಕ್ಕೆ ಆಗಿರಲಿ, ನಮಗೆ ಪ್ರತಿ ಜೀವವೂ ಮುಖ್ಯ. ಈ ಹೀನ ಕೃತ್ಯ ಎಸಗಿರುವ ಅಪರಾಧಿಗಳ ಹೆಡೆಮುರಿ ಕಟ್ಟುವುದು ನಿಶ್ಚಿತ ಎಂದು ಹೇಳಿದ್ದಾರೆ.

ಅಲ್ಲದೆ ಬಿಜೆಪಿಯವರು ಸದಾಕಾಲ ಸಾವಿನಲ್ಲಿ ರಾಜಕಾರಣ ಮಾಡುತ್ತಾರೆ. ಇಂದು ಅವರು ಮಂಗಳೂರಿಗೆ ಹೊರಟಿದ್ದಾರೆ, ಕಳೆದ ವಾರ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಕೃತ್ಯಕ್ಕೆ 26 ಜನರು ಸಾವಿಗೀಡಾದರು, ಅಲ್ಲಿಗೆ ಇವರು ಹೋಗಿದ್ರಾ?ಅದು ಕೂಡ ಭದ್ರತಾ ವೈಫಲ್ಯವಲ್ಲವಾ? ಎಂದು ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

You may also like