Home » Mangaluru : ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ- ಬಂಧಿತ ಆರೋಪಿಗಳಲ್ಲಿ ಇಬ್ಬರು ಹಿಂದೂಗಳು!

Mangaluru : ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ- ಬಂಧಿತ ಆರೋಪಿಗಳಲ್ಲಿ ಇಬ್ಬರು ಹಿಂದೂಗಳು!

0 comments

Mangaluru : ಮಂಗಳೂರಿನಲ್ಲಿ ಭೀಕರವಾಗಿ ಹತ್ಯೆಗೆ ಒಳಗಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇದೀಗ ಅಚ್ಚರಿ ವಿಚಾರವೊಂದು ಹೊರ ಬಿದ್ದಿದ್ದು ಈ ಆರೋಪಿಗಳ ಪೈಕಿ ಇಬ್ಬರು ಹಿಂದೂ ಸಮುದಾಯದವರು ಎನ್ನಲಾಗಿದೆ.

ಹೌದು, ಸುಹಾಸ್ ಶೆಟ್ಟಿ ಕೊಲೆ ಪ್ರಕಾರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ 8 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಇಬ್ಬರು ಹಿಂದೂ ಯುವಕರೂ ಸೇರಿದ್ದಾರೆ. ಮಂಗಳೂರು ಮೂಲದ ಸಫ್ವಾನ್‌ ಗ್ಯಾಂಗ್‌ ಸುಹಾಸ್‌ನನ್ನು ಹತ್ಯೆ ಮಾಡಿರುವುದು ಬಯಲಾಗಿದೆ. ಇನ್ನು ಬಂಧಿತರನ್ನು ಸಫ್ವಾನ್‌(29), ನಿಯಾಜ್‌(28),ಮೊಹಮ್ಮದ್‌ ಮುಝಂಮಿಲ್(‌32), ಕಲಂದರ್‌ ಶಾಫಿ(31), ಮೊಹಮ್ಮದ್‌ ಇರಜವಾನ್‌(28), ಚಿಕ್ಕಮಗಳೂರಿನ ರಂಜಿತ್(‌19)ಹಾಗೂ ನಾಗರಾಜ್‌(20) ಎಂದು ಗುರುತಿಸಲಾಗಿದೆ. ಇನ್ನು ಸಫ್ವಾನ್‌ ಈ ಹತ್ಯೆಯ ಪ್ರಮುಖ ಆರೋಪಿ ಎನ್ನಲಾಗಿದೆ.

ಇನ್ನು ಸುಹಾಸ್‌ ಶೆಟ್ಟಿಯ ಸ್ನೇಹಿತ ಪ್ರಶಾಂತ್‌ಗೂ ಸಫ್ವಾನ್‌ ನಡುವೆ ಎರಡು ವರ್ಷಗಳ ಹಿಂದೆ ಗಲಾಟೆ ಉಂಟಾಗಿತ್ತು. 2023ರಲ್ಲಿ ಪ್ರಶಾಂತ್‌ ಸಫ್ವಾನ್‌ಗೆ ಚೂರಿ ಇರಿದಿದ್ದ. ಈ ವೇಳೆ ಸುಹಾಸ್‌ ಪ್ರಶಾಂತ್‌ ಪರವಾಗಿ ನಿಂತಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ.

You may also like