Mangaluru : ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಹಾಗೂ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ನಡೆದ ಮೊಹಮ್ಮದ್ ಫಾಜಿಲ್ ಹತ್ಯೆಯ ಆರೋಪಿ ಸುಹಾಸ್ ಶೆಟ್ಟಿಯನ್ನು ನಾಲ್ವರು ಹೊಂಚು ಹಾಕಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಇದೀಗ ಹತ ಸುಹಾಸ್ ಶೆಟ್ಟಿ ತಾಯಿಯವರು ಮೊದಲ ಬಾರಿಗೆ ಮಾತನಾಡಿದ್ದಾರೆ.
ಹೌದು, ಆತ ತಾನು ಕೊನೆಯ ಉಸಿರು ಇರುವವರೆಗೂ ಹಿಂದುತ್ವಕ್ಕಾಗಿ ಹೋರಾಡುತ್ತೇನೆ ಎಂದಿದ್ದ. ಆದರೆ ಈಗ ಅವನ ಉಸಿರನ್ನೇ ನಿಲ್ಲಿಸಲಾಗಿದೆ. ನಿನ್ನೆ ನಾವೆಲ್ಲರೂ ಒಂದು ಮದುವೆ ಕಾರ್ಯಕ್ರಮದಲ್ಲಿ ಇದ್ದೆವು. ಇಲ್ಲದಿದ್ದರೆ ಪ್ರತಿದಿನದಂತೆ ನಿನ್ನೆಯೂ ಆತನಿಗೆ ಕರೆ ಮಾಡಬೇಕಿತ್ತು. ನಿನ್ನೆ ಮದುವೆ ಕೆಲಸದಲ್ಲಿ ಅವನಿಗೆ ಕರೆ ಮಾಡಲಾಗಲಿಲ್ಲ ಎಂದು ಸುಹಾಸ್ ತಾಯಿ ಕಣ್ಣೀರಿಟ್ಟಿದ್ದಾರೆ.
ಹಿಂದೆಯಿಂದ ಕೊಲೆ ಮಾಡುವವರಿಗೆ ಭಯವೇ ಇಲ್ಲ. ಹಿಂದೂಗಳು ಹೆದರಿ ಬದುಕಬೇಕಿದೆ. ಆರೋಪಿಗಳು ಯಾರೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗಿಬೇಕು. ಇನ್ನೊಮ್ಮೆ ಇಂಥಾ ಘಟನೆಗಳು ನಡೆಯಬಾರದು ಎಂದು ಸುಹಾಸ್ ಶೆಟ್ಟಿ ತಾಯಿ ಹೇಳಿದ್ದಾರೆ.
