1
Pakistan Attack: ವಾಯುವ್ಯ ಪಾಕಿಸ್ತಾನದ ಬನ್ನು ಕಂಟೋನ್ಮೆಂಟ್ ಗುರಿಯಾಗಿಸಿ ಮಂಗಳವಾರ ಸಂಜೆ ಆತ್ಮಾಹುತಿ ದಾಳಿ ನಡೆದಿದ್ದು, 9 ಮಂದಿ ಸಾವಿಗೀಡಾಗಿದ್ದಾರೆ. 16 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 6 ಜನ ಭಯೋತ್ಪಾದಕರು ಸೇರಿದ್ದಾರೆ. ಎರಡು ವಾಹನಗಳಲ್ಲಿ ಸ್ಫೋಟಕಗಳು ತುಂಬಿದ್ದು, ಎರಡು ವಾಹನಗಳು ಮಿಲಿಟರಿ ಗಡಿ ಗೋಡೆಗೆ ಡಿಕ್ಕಿ ಹೊಡೆದಾಗ ದಾಳಿ ಸಂಭವಿಸಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ.
ಹಫೀಜ್ ಗುಲ್ ಬಹದ್ದೂರ್ ಜೊತೆ ಸಂಬಂಧ ಹೊಂದಿರುವ ಜೈಶ್ ಅಲ್ ಫರ್ಸಾನ್ ಎಂಬ ಬಣವು ಈ ದಾಳಿಯ ಹೊಣೆಯನ್ನು ಹೊತ್ತಿದೆ. ಸಾವಿಗೀಡಾದವರಲ್ಲಿ ಐದು ಮಂದಿ ನಾಗರಿಕರು ಸೇರಿದ್ದು, ಕಂಟೋನ್ಮೆಂಟ್‌ನ ಗಡಿ ಗೋಡೆಯ ಪಕ್ಕದಲ್ಲಿರುವ ಮಸೀದಿಯ ಅವಶೇಷಗಳಿಂದ ಇನ್ನೂ ನಾಲ್ಕು ಶವ ತೆಗೆಯಲಾಗಿದೆ. ಮಸೀದಿಗೆ ಸ್ಫೋಟದಿಂದ ಭಾರೀ ಹಾನಿಯಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದ.
