Home » Chakravatry Sulibele: ಮೇಕೆಯನ್ನು ದೇವರೆಂದ ಸೂಲಿಬೆಲೆ- ‘ಮುಸ್ಲಿಂ ಆಯ್ತು ಈಗ ನಮ್ಮ ತಂಟೆಗೂ ಬಂದ’ ಎಂದ ನಾನ್ ವೆಜಿಟೇರಿಯನ್ಸ್!!

Chakravatry Sulibele: ಮೇಕೆಯನ್ನು ದೇವರೆಂದ ಸೂಲಿಬೆಲೆ- ‘ಮುಸ್ಲಿಂ ಆಯ್ತು ಈಗ ನಮ್ಮ ತಂಟೆಗೂ ಬಂದ’ ಎಂದ ನಾನ್ ವೆಜಿಟೇರಿಯನ್ಸ್!!

0 comments

Chakravatry Sulibele : ನಾಡಿನ ತಾತ ಭಾಷಣಕಾರ ನೆನಸಿರುವ ಚಕ್ರವರ್ತಿ ಸೂಲಿಬೆಲೆಯವರು ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿಚಾರಕ್ಕೆ ರೋಲ್ ಆಗುತ್ತಲೇ ಇರುತ್ತಾರೆ. ಇದೀಗ ಕುರಿಯನ್ನು ದೇವರೆಂದು ಮಾಂಸಾಹಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

https://x.com/DEEPUVAJRAMUNI/status/1931384363398340616?t=DNoy7UhEffUnibG4J-UPNQ&s=19

ಹೌದು, ಒಂದು ವಿಷಯದಿಂದ ಟ್ರೋಲ್‌ನಲ್ಲಿ ಚಾಲ್ತಿಯಲ್ಲಿರುವ ಚಕ್ರವರ್ತಿ ಸೂಲಿಬೆಲೆ ಇದೀಗ ತಮ್ಮ ಹೊಸ ಎಕ್ಸ್‌ ಪೋಸ್ಟ್‌ನಿಂದಾಗಿ ಮತ್ತೊಮ್ಮೆ ಚರ್ಚೆಗೀಡಾಗಿದ್ದಾರೆ. ಮೇಕೆಯೊಂದನ್ನು ತಬ್ಬಿ ಹಿಡಿದಿರುವ ಫೋಟೊವನ್ನು ಹಂಚಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ ʼಇನ್‌ ದ ನೇಮ್‌ ಆಫ್‌ ಗಾಡ್‌ʼ ( ದೇವರ ಹೆಸರಿನಲ್ಲಿ ) ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾಂಸಹಾರಿಗಳು ಕಿಡಿಕಾರಿದ್ದಾರೆ. ದೀಪು ಗೌಡ್ರು ಎಂಬ ಎಕ್ಸ್‌ ಬಳಕೆದಾರರು ಗ್ರಾಮದೇವತೆಗೆ ಪೂಜೆ ಮಾಡಿ ಕುರಿ ಮೇಕೆ ಬಲಿ ಕೊಟ್ಟು ಆಚರಣೆ ಮಾಡುವ ಜಾತಿಗಳನ್ನು ಹೀಯಾಳಿಸಲು ಈ ರೀತಿಯ ಪೋಸ್ಟ್ ಹಂಚಿಕೊಂಡಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಮುಸ್ಲಿಮರ ವಿರುದ್ಧ ಮಾಂಸಹಾರ ವಿಷಯಕ್ಕಾಗಿ ಕಿತ್ತಾಡಿದ ಈತ ಈಗ ನಮ್ಮ ತಂಟೆಗೂ ಬಂದಿದ್ದಾನೆ ಎಂದು ಪೋಸ್ಟ್‌ಗೆ ವಿಭಿನ್ನ ಆಯಾಮದಲ್ಲಿ ಚರ್ಚೆಯುಂಟಾಗುವಂತೆ ಮಾಡಿದ್ದಾರೆ.

You may also like