Home » ಬೆಳ್ತಂಗಡಿ : ಸುಲ್ಕೇರಿಯಲ್ಲಿ ಮನೆಯಿಂದ ಕಣ್ಮರೆಯಾದ ಮಗು ಶವವಾಗಿ ಪತ್ತೆ

ಬೆಳ್ತಂಗಡಿ : ಸುಲ್ಕೇರಿಯಲ್ಲಿ ಮನೆಯಿಂದ ಕಣ್ಮರೆಯಾದ ಮಗು ಶವವಾಗಿ ಪತ್ತೆ

by Praveen Chennavara
0 comments

ಬೆಳ್ತಂಗಡಿ : ಸುಲ್ಕೇರಿ ಗ್ರಾಮದ ಜಂತಿಗೋಳಿ ಪರಾರಿ ಎಂಬಲ್ಲಿ ಮನೆಯಲ್ಲಿದ್ದ 2 ವರ್ಷ ಪ್ರಾಯದ ಮಗು ಆ.10ರಂದು ಮಧ್ಯಾಹ್ನದಿಂದ ನಾಪತ್ತೆಯಾದ ಮಗು ಶವವಾಗಿ ಪತ್ತೆಯಾಗಿದೆ.

ಮಗುವಿನ ಶವ ಮನೆಯಿಂದ ತುಸು ದೂರದ ನದಿಯಲ್ಲಿ ಪತ್ತೆಯಾಗಿದೆ.ಅಗ್ನಿ ಶಾಮಕ ದಳದವರು ಮಗುವಿನ ಶವವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ.

ಸುಕ್ಕೇರಿ ಜಂತಿಗೋಳಿ ಪರಾರಿ ನಿವಾಸಿ ಸಂಜೀವ ಶೆಟ್ಟಿ ಎಂಬವರ ಪುತ್ರಿ ಸುಚಿತ್ರಾ ಮತ್ತು ಸುಭಾಷ್ ದಂಪತಿ ತಮ್ಮ ಎರಡೂವರೆ ವರ್ಷದ ಮಗುವಿನೊಂದಿಗೆ ತವರು ಮನೆಯಲ್ಲಿಯೇ ವಾಸ್ತವ್ಯವಿದ್ದರು.

ಮಂಗಳವಾರ ಮಧ್ಯಾಹ್ನ ಸುಚಿತ್ರಾ ರವರು ಮಗುವನ್ನು ಮನೆಯಲ್ಲಿಯೇ ಬಿಟ್ಟು ತಮ್ಮ ತಾಯಿಯೊಂದಿಗೆ ಹಸುಗಳಿಗೆ ಹುಲ್ಲು ತರಲೆಂದು ತೋಟಕ್ಕೆ ಹೋಗಿದ್ದರು. ಹಿಂದಿರುಗಿ ಬಂದ ವೇಳೆ ಮಗು ಮನೆಯಲ್ಲಿ ಕಾಣಿಸದೇ ಇರುವುದನ್ನು ಕಂಡು ಹುಡುಕಾಟ ನಡೆಸಿದ್ದಾರೆ.

ಸ್ಥಳೀಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, `ಊರವರು, ಸ್ವಯಂಸೇವಕರೆಲ್ಲರೂ ಮಗುವಿನ ಶೋಧಕಾರ್ಯ ನಡೆಸಿದ್ದು,ಇದೀಗ ಮಗು ಶವವಾಗಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ವೇಣೂರು ಪೊಲೀಸ್ ಠಾಣೆಗೆ ಯಲ್ಲಿ ದೂರು ದಾಖಲಾಗಿದ್ದು,ಸ್ಥಳಕ್ಕೆ ವೇಣೂರು ಠಾಣಾ ಎಸ್.ಐ ಲೋಲಾಕ್ಷ ಮತ್ತು ಸಿಬ್ಬಂದಿವರ್ಗದವರು ಭೇಟಿ ನೀಡಿದ್ದು ಶೋಧಕಾರ್ಯ ನಡೆಸಿದ್ದರು‌.

You may also like

Leave a Comment