3
ಸುಳ್ಯ:ಹೊಳೆಯಲ್ಲಿ ಸ್ನಾನ ಮಾಡಲೆಂದು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಜೆ ಅರಂತೋಡು ಗ್ರಾಮದ ಕುಕ್ಕುಂಬಳದಲ್ಲಿ ನಡೆದಿದೆ.

ಮೃತರನ್ನು ಮನ್ವಿತ್(12 ವ)ಎಂದು ಗುರುತಿಸಲಾಗಿದೆ.
ಅರಂತೋಡಿನ ಬಾಲಕೃಷ್ಣ ಶೆಟ್ಟಿಯವರ ಪುತ್ರಿಯನ್ನು ಮಂಗಳೂರಿಗೆ ವಿವಾಹ ಮಾಡಿಕೊಡಲಾಗಿತ್ತು. ಹೀಗಾಗಿ ಅವರ ಮಗ ಮನ್ವಿತ್ ಅಜ್ಜನ ಮನೆಗೆ ಬಂದಾಗ,ಹಂಸ ಕುಕ್ಕುಂಬಳರವರ ಮನೆ ಸಮೀಪ ಸ್ನಾನ ಮಾಡಲೆಂದು ನೀರಿಗಿಳಿದಿದ್ದಾರೆ.
ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.ಮೃತದೇಹವನ್ನು ಶರತ್, ನಿಧೀಶ್, ತಾಜ್ ಅರಂತೋಡು, ಮುನೀರ್ ನೀರಿನಿಂದ ಹೊರತೆಗೆಯಲು ಸಹಕರಿಸಿದ್ದಾರೆ.
